ಅಹಮದಾಬಾದ್:ಗುಜರಾತ್‌ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಾಗಿ 38 ಹಾಲಿ ಬಿಜೆಪಿ ಶಾಸಕರು ಸೇರಿದಂತೆ ಮೊರ್ಬಿಯ ಬಿಜೆಪಿ ಶಾಸಕ ಮತ್ತು ಇತರ ನಾಲ್ವರು ಸಚಿವರಿಗೆ ಟಿಕೆಟ್ ನೀಡಲಾಗಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರೂ ಆಗಿರುವ ಮೊರ್ಬಿಯ ಹಾಲಿ ಬಿಜೆಪಿ ಶಾಸಕ ಬ್ರಿಜೇಶ್ ಮೆರ್ಜಾ ಅವರಿಗೆ ಕೇಸರಿ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿದೆ. ಇತ್ತೀಚೆಗೆ ಮೋರ್ಬಿಯ ಹಳೆಯ ತೂಗು ಸೇತುವೆ ನವೀಕರಿಸಿದ ಕೆಲವೇ ದಿನಗಳಲ್ಲಿ ಕುಸಿದು 135 ಜೀವಗಳನ್ನು ಬಲಿ ಪಡೆದಿತ್ತು.
2012 ಮತ್ತು 2017ರಲ್ಲಿ ಎರಡು ಬಾರಿ ಕಛ್‌ನ ಭುಜ್ ಅಸೆಂಬ್ಲಿಯಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದ ಗುಜರಾತ್ ವಿಧಾನಸಭೆ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿದೆ.
ಮಾಜಿ ಸಿಎಂ, ಡಿಸಿಎಂ, ಸಚಿವರಿಗೂ ಟಿಕೆಟ್ ನಿರಾಕರಣೆ:ರಾಜ್ಯ ಸಂಸದೀಯ ಮತ್ತು ಶಾಸಕಾಂಗ ವ್ಯವಹಾರಗಳ ಸಚಿವ ರಾಜೇಂದ್ರ ತ್ರಿವೇದಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಪ್ರದೀಪ್ ಪರ್ಮಾರ್, ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಬ್ರಿಜೇಶ್ ಮೆರ್ಜಾ, ಸಾರಿಗೆ ಸಚಿವ ಅರವಿಂದ ರೈಯಾನಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಆರ್.ಸಿ.ಮಕ್ವಾನಾ ಅವರನ್ನು ಕೂಡ ಈ ಬಾರಿ ಬಿಜೆಪಿ ಪರಿಗಣಿಸಿಲ್ಲ.