ಕರ್ನಾಟಕ

karnataka

ETV Bharat / bharat

ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ - ಆಮ್ ಆದ್ಮಿ ಪಕ್ಷ

ಗುಜರಾತ್​ನ ದಶಕಗಳಿಂದ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇತ್ತು. 1995ರಲ್ಲಿ ಕಾಂಗ್ರೆಸ್​ ತನ್ನ ಭೂಮಿಕೆಯನ್ನು ಬಿಟ್ಟು ಕೊಟ್ಟಿದೆ. ಆದರೂ, ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಪ್ರಮುಖ ಸವಾಲಾಗಿತ್ತು. ಇದೇ ಆಗಸ್ಟ್ ತಿಂಗಳಿನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್​ ಚುನಾವಣಾ ಆಖಾಡಕ್ಕೆ ಧುಮುಕಿದೆ - ಶ್ಯಾಮ್ ಪರೇಖ್ ವಿಶ್ಲೇಷಣೆ ಹೀಗಿದೆ

gujarat-polls-bjps-bid-to-retain-power-and-its-challenges
ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ

By

Published : Nov 18, 2022, 10:23 PM IST

1960ರಲ್ಲಿ ಗುಜರಾತ್​ ರಾಜ್ಯತ್ವವನ್ನು ಪಡೆದಾಗಿನಿಂದಲೂ ರಾಜ್ಯ ವಿಧಾನಸಭಾ ಚುನಾವಣೆಯು ಕುತೂಹಲಕಾರಿಯಾಗಿಯೇ ನಡೆದಿದೆ. 2001ರಲ್ಲಿ ನರೇಂದ್ರ ಮೋದಿ ರಾಜಕೀಯ ರಂಗ ಪ್ರವೇಶದ ನಂತರವೂ ಗುಜರಾತ್​ ಚುನಾವಣೆ ಆಸಕ್ತಿಕರವಾಗಿಯೇ ಇದೆ. ನರೇಂದ್ರ ಮೋದಿ ಅವರ ಭಾರೀ ಜನಪ್ರಿಯತೆಯ ಹೊರತಾಗಿಯೂ 2002, 2007 ಮತ್ತು 2012ರಲ್ಲಿ ಚುನಾವಣೆಯಲ್ಲಿ ಗೆಲುವು ಕಂಡಿದೆ. 2017ರಲ್ಲಿ ಮೋದಿ ಸ್ಟಾರ್ ಪ್ರಚಾರಕರಾಗಿದ್ದರು. ಈಗ 2022ರಲ್ಲೂ ಮೋದಿ ಹೆಚ್ಚು ಹುರುಪಿನಿಂದ ಪ್ರಚಾರ ಮಾಡುತ್ತಿದ್ದಾರೆ.

182 ಸದಸ್ಯ ಬಲದ ಗುಜರಾತ್​ನ 15ನೇ ವಿಧಾನಸಭೆ ಚುನಾವಣೆಗೆ ನವೆಂಬರ್ 3ರಂದು ಅಧಿಸೂಚನೆ ಪ್ರಕಟಿಸಲಾಗಿದೆ. 182 ಕ್ಷೇತ್ರಗಳ ಪೈಕಿ 13 ಸ್ಥಾನಗಳು ಪರಿಶಿಷ್ಟ ಜಾತಿಗಳಿಗೆ ಮತ್ತು 27 ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿದೆ. ರಾಜ್ಯವು 2022ರಲ್ಲಿ 7 ಕೋಟಿ ಜನಸಂಖ್ಯೆಯನ್ನು ದಾಟಿದೆ ಎಂದು ಅಂದಾಜಿಸಲಾಗಿದೆ. ಆದರೂ ಅಧಿಕೃತ ಅಂಕಿ - ಅಂಶಗಳು 6.5 ಕೋಟಿಗಿಂತ ಕಡಿಮೆ ಇದ್ದು, 4.91 ಕೋಟಿ ಮತದಾರರಿದ್ದಾರೆ.

ಈ ವರ್ಷ ಒಟ್ಟು 3.25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಇದೇ ಡಿಸೆಂಬರ್ 1ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ನಂತರ ಡಿಸೆಂಬರ್ 5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಡಿಸೆಂಬರ್ 10ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.

ಈ ಬಾರಿ ತ್ರಿಕೋನ ಸ್ಪರ್ಧೆ ನಿರೀಕ್ಷೆ: 2017ರ ಚುನಾವಣೆಯಲ್ಲಿ 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಕಾಂಗ್ರೆಸ್ 77 ಸ್ಥಾನ ಗೆದ್ದಿತು. ಆದಾಗ್ಯೂ, ನಂತರದ ವರ್ಷಗಳಲ್ಲಿ ಪಕ್ಷಾಂತರ ಮತ್ತು ಉಪಚುನಾವಣೆಗಳು ಬಿಜೆಪಿ ತನ್ನ ಶಾಸಕರ ಸಂಖ್ಯೆಯನ್ನು 111ಕ್ಕೆ ಏರಿಸಿಕೊಂಡಿತ್ತು. ಆದರೆ, ಕಾಂಗ್ರೆಸ್ ಶಾಸಕರ ಸಂಖ್ಯೆ 60ಕ್ಕೆ ಇಳಿದಿತ್ತು. ಈ ಬಾರಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ದಟ್ಟವಾಗಿದೆ.

ದಶಕಗಳಿಂದ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇತ್ತು. 1995ರಲ್ಲಿ ಕಾಂಗ್ರೆಸ್​ ತನ್ನ ಭೂಮಿಕೆಯನ್ನು ಬಿಟ್ಟು ಕೊಟ್ಟಿದೆ. ಆದರೂ, ಇಲ್ಲಿಯವರೆಗೆ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಪ್ರಮುಖ ಸವಾಲಾಗಿತ್ತು. ಇದೇ ಆಗಸ್ಟ್ ತಿಂಗಳಿನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್​ ಚುನಾವಣಾ ಆಖಾಡಕ್ಕೆ ಧುಮುಕಿದೆ.

ಈ ಬಾರಿಯ ಚುನಾವಣಾ ದಿನಾಂಕಗಳ ಘೋಷಣೆಗೆ ಕೇವಲ ಒಂದು ತಿಂಗಳ ಮೊದಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನಾ ಮತ್ತು ಲೋಕಾರ್ಪಣೆ ಕಾರ್ಯಕ್ರಮಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕೆಲ ತಿಂಗಗಳಲ್ಲೇ ಪ್ರಧಾನಿ ಗುಜರಾತ್‌ಗೆ ಭೇಟಿ ನೀಡಿದ ಸಂಖ್ಯೆಯು ಒಂದು ರೀತಿಯ ದಾಖಲೆಯಾಗಿರಬೇಕು.

ಕಾಂಗ್ರೆಸ್​ಗೆ ನಾಯಕತ್ವದ ಕೊರತೆ: ರಾಜ್ಯವನ್ನು ಮರಳಿ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಸಂಘಟಿತ ಪ್ರಯತ್ನದ ಕೊರತೆ ಇದೆ. ಜೊತೆ ಸ್ಪಷ್ಟ ನಾಯಕತ್ವದ ಮುಖದ ಅನುಪಸ್ಥಿತಿಯಿಂದಾಗಿ ಚುನಾವಣೆಯಲ್ಲಿ ಸ್ಥಿರವಾಗಿ ಅದು ಕುಸಿತಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಂದೇ ಒಂದು ಮುಖವನ್ನು ಎಂದಿಗೂ ಕಾಂಗ್ರೆಸ್​ ಬಿಂಬಿಸಲಿಲ್ಲ. ಈ ನಿರ್ವಾತ ಸನ್ನಿವೇಶದಲ್ಲಿ ಆಮ್ ಆದ್ಮಿ ಪಕ್ಷ ತನ್ನ ಬೇರುಗಳನ್ನು ಬೆಳೆಸಲು ಪ್ರಾರಂಭಿಸಿದೆ.

2017ರ ಚುನಾವಣೆಗಿಂತ ಈ ಬಾರಿ ಬಿಜೆಪಿಗೆ ನಿರೀಕ್ಷೆಗೂ ಮೀರಿ ಕಠಿಣವಾಗಿ ಪರಿಣಮಿಸಿದೆ. ಕಳೆದ ಎರಡು ವಾರಗಳಲ್ಲಿ ಗುಜರಾತ್‌ನಾದ್ಯಂತ ಪ್ರಧಾನಿ ಮೋದಿಯವರು ಅತ್ಯಂತ ಭಾವನಾತ್ಮಕ ಭಾಷಣ ಮಾಡಿ ಬಿರುಸಿನ ಪ್ರಚಾರ ಮಾಡಿದರು. ಅಧಿಕಾರ ವಿರೋಧಿ ಮತ್ತು ಇತರ ಹಲವಾರು ಸವಾಲುಗಳನ್ನು ಅರಿತಿರುವ ಬಿಜೆಪಿಯು ಅಧಿಕಾರವನ್ನು ಉಳಿಸಿಕೊಳ್ಳಲು ಬಹಳ ಶ್ರಮಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಈ ಹಿಂದಿನ ಚುನಾವಣೆಗಳತ್ತ ಒಂದು ನೋಟ: ಪ್ರತಿ ಚುನಾವಣೆಯನ್ನು ಆಸಕ್ತಿದಾಯಕವಾಗಿ ಪರಿವರ್ತಿಸುವ ಪರಂಪರೆಯನ್ನು ಗುಜರಾತ್ ಹೊಂದಿದೆ. 1960ರಲ್ಲಿ ರಾಜ್ಯ ರಚನೆಯಾದ ನಂತರ 1962ರಲ್ಲಿ ವಿಧಾನಸಭೆಯ 154 ಸ್ಥಾನಗಳಿಗೆ ಮೊದಲ ಚುನಾವಣೆ ನಡೆದಿತ್ತು. ಭಾಷಾವಾರು ಪುನರ್​​ರಚನೆಯಿಂದ ಉದಯಿಸಿದ ರಾಜ್ಯದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.

ಆದರೆ, ಗುಜರಾತ್‌ನ ಎರಡನೇ ಮುಖ್ಯಮಂತ್ರಿ ಬಲ್ವಂತರಾಯ್ ಮೆಹ್ತಾ ಅವರ ವಿಮಾನವನ್ನು 1965ರಲ್ಲಿ ಕಚ್ ಗಡಿಯ ಬಳಿಪಾಕಿಸ್ತಾನಿ ಪಡೆಗಳು ಹೊಡೆದುರುಳಿಸಿದಾಗ ನಿಧನರಾದರು. ಅವರ ಸ್ಥಾನಕ್ಕೆ ಬಂದ ಹಿತೇಂದ್ರ ದೇಸಾಯಿ 1967ರ ಚುನಾವಣೆಯಲ್ಲಿ ಚುನಾಯಿತರಾದರು. ಆದಾಗ್ಯೂ, 1971ರಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು. ತುರ್ತು ಪರಿಸ್ಥಿತಿಯ ಅವಧಿ ಸೇರಿ ಗುಜರಾತ್​ ನಾಲ್ಕು ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ಕಂಡಿದೆ.

1973ರಲ್ಲಿ ಚುನಾಯಿತರಾದ ಚಿಮನ್‌ಭಾಯ್ ಪಟೇಲ್​ ನವನಿರ್ಮಾಣ ಆಂದೋಲನ, ಮುಖ್ಯವಾಗಿ ಭ್ರಷ್ಟಾಚಾರದ ವಿರುದ್ಧದ ವಿದ್ಯಾರ್ಥಿ ನೇತೃತ್ವದ ಚಳುವಳಿಯಿಂದಾಗಿ ಶೀಘ್ರದಲ್ಲೇ ಸ್ಥಾನ ಕಳೆದುಕೊಂಡಿದರು. 1975ರಲ್ಲಿ ಬಾಬುಭಾಯಿ ಜಸ್ಭಾಯ್ ಪಟೇಲ್ ನೇತೃತ್ವದ ಜನತಾ ಮೋರ್ಚಾ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿತು. ಆದರೆ, ಅವರು ಅಧಿಕಾರಕ್ಕೆ ಬಂದ ಕೆಲವು ತಿಂಗಳಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

ಆದಾಗ್ಯೂ, 1980ರಲ್ಲಿ ಮಾಧವಸಿಂಹ ಸೋಲಂಕಿ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 1985ರಲ್ಲಿ 149 ಸ್ಥಾನಗಳೊಂದಿಗೆ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬಂತು. ಇದು ಗುಜರಾತ್‌ನಲ್ಲಿ ಯಾವುದೇ ಪಕ್ಷಕ್ಕೆ ಇದುವರೆಗೆ ಸಿಕ್ಕ ಅತ್ಯಧಿಕ ಸ್ಥಾನಗಳಾಗಿವೆ. ಆದರೆ, ನಂತರದಲ್ಲಿ ಗುಜರಾತ್ ರಾಜಕೀಯಕ್ಕೆ ಮಹತ್ವದ ತಿರುವು ಸಿಕ್ಕಿತ್ತು. 1980ರ ದಶಕದಲ್ಲಿ ನೇರವಾಗಿ ಕಾಂಗ್ರೆಸ್‌ಗೆ ಸಹಾಯ ಮಾಡಿದ ಜಾತಿಗಳು, 1990ರ ದಶಕದಿಂದ ಪರೋಕ್ಷವಾಗಿ ಬಿಜೆಪಿಗೆ ಹೆಚ್ಚು ನೆರವಾಗಲು ಆರಂಭಿಸಿದವು.

ಹಿಂದುತ್ವದ ಪ್ರಯೋಗಾಲಯ: ಜಾತಿಯ ಆಧಾರದ ಮೇಲೆ ಮತಬ್ಯಾಂಕ್‌ನ ಪುನರ್‌ರಚನೆ ಕಾಂಗ್ರೆಸ್‌ನಿಂದ ಅತ್ಯಂತ ಪ್ರಭಾವಿ ಪಟೇಲ್‌ ಮತಬ್ಯಾಂಕ್‌ ಕಾಂಗ್ರೆಸ್‌ ಮಡಿಲಿನಿಂದ ಹೊರಬರಲು ಕಾರಣವಾಯಿತು. ಇದರ ಪರಿಣಾಮ ಮತ್ತು ಇತರ ಮೇಲ್ಜಾತಿ ಮತಗಳು ಕೇಸರಿ ಪಡೆಗಳಿಗೆ ಅಂತಿಮವಾಗಿ ಗುಜರಾತ್​ ಅನ್ನು 'ಹಿಂದುತ್ವದ ಪ್ರಯೋಗಾಲಯ'ವಾಗಿ ಪರಿವರ್ತಿಸಲು ಸಹಾಯ ಮಾಡಿತು ಮತ್ತು ಅದು ಧರ್ಮ ರಾಜಕಾರಣಕ್ಕೂ ಕಾರಣವಾಯಿತು.

1990ರಲ್ಲಿ ಕಾಂಗ್ರೆಸ್ ಕೇವಲ 33 ಸ್ಥಾನಗಳನ್ನು ಪಡೆದು ಹೀನಾಯ ಸ್ಥಿತಿಗೆ ತಲುಪಿತು. ಅಂದಿನಿಂದ ಕಾಂಗ್ರೆಸ್ ತನ್ನ ಸ್ವಂತ ಮುಖ್ಯಮಂತ್ರಿಯನ್ನು ಅಥವಾ ತನ್ನದೇ ಆದ ಅಧಿಕಾರವನ್ನು ಮತ್ತೆ ನೋಡಿಲ್ಲ. 1980ರಲ್ಲಿ ಕೇವಲ 9 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, 1990ರಲ್ಲಿ 67 ಸ್ಥಾನಗಳನ್ನು ಪಡೆದುಕೊಂಡಿತು. ಇದು ಕಾಂಗ್ರೆಸ್​ನ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಇದಾಗಿ ಮೂರು ದಶಕಗಳು ಕಳೆದರೂ ಬಿಜೆಪಿ ಕಾಂಗ್ರೆಸ್‌ಗಿಂತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

1995ರಲ್ಲಿ ಕೇಶುಭಾಯ್ ಪಟೇಲ್ ನೇತೃತ್ವದಲ್ಲಿ ಬಿಜೆಪಿ 121 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ನಂತರದ ಮೂರು ವರ್ಷಗಳಲ್ಲಿ ಕೇಶುಭಾಯ್ ಪಟೇಲ್, ಶಂಕರಸಿನ್ಹಾ ವಘೇಲಾ ಮತ್ತು ದಿಲೀಪ್ ಪಾರಿಖ್ ಹೀಗೆ.. ಗುಜರಾತ್ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಶಂಕರಸಿನ್ಹಾ ಬಂಡಾಯವು ಅವರ ಅಲ್ಪಾವಧಿಯ ರಾಷ್ಟ್ರೀಯ ಜನತಾ ಪಕ್ಷದ ರಚನೆಗೆ ಕಾರಣವಾಯಿತು, ಅದು ಅಂತಿಮವಾಗಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗುವುದರಲ್ಲಿ ಕೊನೆಗೊಂಡಿತು.

ಇದರಿಂದ 1998ರಲ್ಲಿ ಮಧ್ಯಂತರ ಚುನಾವಣೆಕ್ಕೆ ಕಾರಣವಾಯಿತು. ಆಗ 117 ಸ್ಥಾನಗಳೊಂದಿಗೆ ಕೇಶುಭಾಯ್ ಮತ್ತೆ ಅಧಿಕಾರಕ್ಕೆ ಬಂದರು. 2001ರ ಭೂಕಂಪದ ನಂತರ ಕೇಶುಭಾಯ್ ಜನಪ್ರಿಯತೆಯು ಹಿನ್ನಡೆ ಅನುಭವಿಸಿತು. ಆಗ ಅವರ ಸ್ಥಾನಕ್ಕೆ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಯಿತು. 2002ರ ಫೆಬ್ರವರಿಯಲ್ಲಿ ನಡೆದ ಗುಜರಾತ್ ಗಲಭೆಗಳು ಗುಜರಾತ್​ ಮತ್ತು ದೇಶದ ರಾಜಕೀಯವನ್ನೇ ಶಾಶ್ವತವಾಗಿ ಬದಲಾಯಿಸಿದವು. 2002ರಲ್ಲಿ ಮೋದಿ 127 ಸ್ಥಾನಗಳೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಇದುವರೆಗೆ ಬಿಜೆಪಿಗೆ ಸಿಕ್ಕ ಅತ್ಯಧಿಕ ಮತ್ತು ಈಗಲೂ ಅದು ದಾಖಲೆಯಾಗಿದೆ.

ಕುತೂಹಲಕಾರಿ ಅಂಶ ಎಂದರೆ ಪ್ರಸ್ತುತ ಮೋದಿಯವರ ಜನಪ್ರಿಯತೆಯು ರಾಷ್ಟ್ರಮಟ್ಟದಲ್ಲಿ ಹೆಚ್ಚುತ್ತಿದೆ. ಇತ್ತ, 1990ರ ನಂತರ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಥಾನಗಳು ಸಹ ಹೆಚ್ಚಾಗುತ್ತಲೇ ಇವೆ. 1990ರಲ್ಲಿ 33, 1995ರಲ್ಲಿ 45, 1998ರಲ್ಲಿ 53, 2002ರಲ್ಲಿ 51, 2007ರಲ್ಲಿ 59, 2012ರಲ್ಲಿ 60 ಮತ್ತು 2017ರಲ್ಲಿ 77 ಸ್ಥಾನಗಳನ್ನು ಗೆದ್ದಿತ್ತು ಎಂಬುವುದು ಗಮನಾರ್ಹ.

ಇದನ್ನೂ ಓದಿ:ಕಲೋಲ್​ ಕ್ಷೇತ್ರದಲ್ಲಿ ಪತಿಯ ವಿರುದ್ಧ ಪತ್ನಿ ಪ್ರಚಾರ.. ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಸದ್ದು

ABOUT THE AUTHOR

...view details