ಕರ್ನಾಟಕ

karnataka

ETV Bharat / bharat

ಬುಲೆಟ್ ಪ್ರೂಫ್​ ಬಾಕ್ಸ್​ನಲ್ಲಿ ವಿಶ್ವದ ಅತ್ಯಂತ ದುಬಾರಿ ಸೂಟ್​ ಸೇಫ್ - ಲಾಲ್​ಜಿ ಪಟೇಲ್​

ಮೋದಿ ಸೂಟ್​ ಹರಾಜಿನಿಂದ ಬಂದ ಹಣವನ್ನು ಗಂಗಾ ಶುದ್ಧೀಕರಣಕ್ಕೆ ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಈ ವಿಚಾರ ತಿಳಿದ ಉದ್ಯಮಿ ಅತಿ ದೊಡ್ಡ ಬಿಡ್​ ಮಾಡಿ ಈ ಸೂಟ್ ಖರೀದಿಸಿದ್ದರು. ಅಂದಿನಿಂದ ಈ ಸೂಟ್ ನೋಡಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ..

PM Modi
PM Modi

By

Published : Aug 13, 2021, 10:08 PM IST

ಸೂರತ್(ಗುಜರಾತ್) :ಫೆಬ್ರವರಿ 20, 2015 ರಂದು ವಿಶ್ವದ ಅತ್ಯಂತ ದುಬಾರಿ ಸೂಟ್​ ಅನ್ನು ಸೂರತ್​ನಲ್ಲಿ ಹರಾಜು ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಧರಿಸಿದ್ದ ಆ ಸೂಟ್​ ಅನ್ನು ಸೂರತ್​ನ ವಜ್ರ ಉದ್ಯಮಿ ಲಾಲ್​ಜಿ ಪಟೇಲ್​ 4.31 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. ಈ ಸೂಟ್ ಖರೀದಿಸಿ ಆರು ವರ್ಷಗಳಾಗಿದ್ದು, ಇಂಥ ದುಬಾರಿ ಸೂಟ್‌ ಅನ್ನು ಈವರೆಗೆ ಯಾರೂ ಖರೀದಿಸಿಲ್ಲ.

ಬುಲೆಟ್ ಪ್ರೂಫ್​​ ಬಾಕ್ಸ್​ನಲ್ಲಿ ಸೂಟ್ :ಈ ಸೂಟ್​ ಹರಾಜು ಆದ ಸಂದರ್ಭದಲ್ಲಿ ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. 10 ಲಕ್ಷ ರೂ.ಮೌಲ್ಯದ ಈ ಸೂಟ್​ ಅನ್ನು ಅಂದು ಸೂರತ್​ನ ಉದ್ಯಮಿ 4.31 ಕೋಟಿ ರೂ.ಗೆ ಖರೀದಿಸಿದ್ದರು. ಇಂದು ಈ ಬಟ್ಟೆಯನ್ನು ಬುಲೆಟ್​ ಪ್ರೂಫ್ ಬಾಕ್ಸ್​ನಲ್ಲಿರಿಸಲಾಗಿದೆ.

ಗಂಗಾ ಶುದ್ಧೀಕರಣಕ್ಕೆ ಹಣ ಬಳಕೆ:ಮೋದಿ ಸೂಟ್​ ಹರಾಜಿನಿಂದ ಬಂದ ಹಣವನ್ನು ಗಂಗಾ ಶುದ್ಧೀಕರಣಕ್ಕೆ ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಈ ವಿಚಾರ ತಿಳಿದ ಉದ್ಯಮಿ ಅತಿ ದೊಡ್ಡ ಬಿಡ್​ ಮಾಡಿ ಈ ಸೂಟ್ ಖರೀದಿಸಿದ್ದರು. ಅಂದಿನಿಂದ ಈ ಸೂಟ್ ನೋಡಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಅಹಮದಾಬಾದ್​ ಕುಶಲಕರ್ಮಿಯಿಂದ ಪ್ರತಿಮೆ ನಿರ್ಮಾಣ :ಲಾಲ್​ಜಿ ಪಟೇಲ್ ಅವರ ಕಾರ್ಖಾನೆಗೆ ದೇಶ ಮತ್ತು ವಿದೇಶಗಳಿಂದ ಜನರು ಬರುತ್ತಾರೆ. ಈ ಸೂಟ್ ಅನ್ನು ವಿಶೇಷವಾಗಿ ಕಾರ್ಖಾನೆಯಲ್ಲಿ ಇರಿಸಿರುವುದರಿಂದ ಜನರು ವಿಶ್ವದ ಅತ್ಯಂತ ದುಬಾರಿ ಸೂಟ್ ಅನ್ನು ನೋಡಬಹುದು. ಪ್ರಧಾನಿ ಮೋದಿ ಈ ಸೂಟ್ ಧರಿಸಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರನ್ನು ಭೇಟಿಯಾಗಿದ್ದರು. ಅಹಮದಾಬಾದ್‌ನ ಒಬ್ಬ ಪರಿಣಿತ ಕುಶಲಕರ್ಮಿ, ಒಬಾಮಾ ಜೊತೆ ಕೈಕುಲುಕುವ ರೀತಿ ಆಧರಿಸಿ ಇದೇ ರೀತಿಯ ಪ್ರತಿಮೆ ರಚಿಸಿದ್ದಾರೆ.

ವರ್ಷಕ್ಕೆ ಎರಡು ಬಾರಿ ಸೂಟ್​ ಕ್ಲೀನ್:ಈ ಬುಲೆಟ್ ಪ್ರೂಫ್ ಬಾಕ್ಸ್ ಅನ್ನು ವರ್ಷಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುತ್ತದೆ. ಸೂಟ್ ಅನ್ನು ವರ್ಷಕ್ಕೆ ಎರಡು ಬಾರಿ ತೊಳೆಯಲಾಗುತ್ತದೆ. ಯಾವುದೇ ದಾಖಲಾತಿ ಇಲ್ಲದ ಈ ಸೂಟ್​ಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಿಂದ ವಿಶ್ವದ ಅತ್ಯಂತ ದುಬಾರಿ ಸೂಟ್ ಪ್ರಶಸ್ತಿ ಸಹ ನೀಡಲಾಗಿದೆ.

ABOUT THE AUTHOR

...view details