ಕರ್ನಾಟಕ

karnataka

ETV Bharat / bharat

ಭಾರಿ ಮಳೆ ಸಂಭವ: ರೆಡ್​ ಅಲರ್ಟ್​ ಘೋಷಣೆ - ಗುಜರಾತ್​ನಲ್ಲಿ ರೆಡ್​ ಅಲರ್ಟ್​ ಘೋಷಣೆ

ಗುಜರಾತ್‌ನಲ್ಲಿ ಮುಂದಿನ ಎರಡು ಮೂರು ದಿನ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

http://10.10.50.80:6060//finalout3/odisha-nle/thumbnail/15-September-2021/13067257_676_13067257_1631668615723.png
ಗುಜರಾತ್​ನಲ್ಲಿ ಭಾರಿ ಮಳೆ ಸಂಭವ

By

Published : Sep 15, 2021, 9:11 AM IST

ಗಾಂಧಿನಗರ:ಮುಂದಿನ ಎರಡು ಮೂರು ದಿನ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಗುಜರಾತ್‌ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಅಂತಿಮ ಹಂತದಲ್ಲಿ, ಪಶ್ಚಿಮ ಕರಾವಳಿಯಲ್ಲಿ ತೀವ್ರತೆಯನ್ನು ಪಡೆಯುವ ಹಿನ್ನೆಲೆ ರಾಜ್ಯದ ಎರಡು ಭಾಗಗಳಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಸೋಮವಾರ ಜಾಮ್‌ನಗರ ಮತ್ತು ರಾಜ್‌ಕೋಟ್‌ನಲ್ಲಿ ಭಾರಿ ಮಳೆಯಾಗಿತ್ತು. ಮಂಗಳವಾರ ಜುನಾಗಢ ಜಿಲ್ಲೆಯಲ್ಲಿ ಸುಮಾರು 100 ಮಿ.ಮಿ.ನಿಂದ 150 ಮಿ.ಮೀ. ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಜುನಾಗಢದ ಅನೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ.

ದಕ್ಷಿಣ ಗುಜರಾತ್‌ನ ಸೂರತ್, ಡ್ಯಾಂಗ್ಸ್, ನವಸಾರಿ, ವಲ್ಸಾದ್, ತಾಪಿ, ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಮನ್, ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಅಮ್ರೇಲಿ, ಭಾವನಗರ, ಗಿರ್- ಸೋಮನಾಥ್, ಮತ್ತು ಸೌರಾಷ್ಟ್ರದ ದಿಯು ಕೇಂದ್ರಾಡಳಿತ ಪ್ರದೇಶವು ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಭಾರಿ ಮಳೆ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ವಾರ್ಧಾ ಬೋಟ್​​ ದುರಂತ: 8 ಮಂದಿಗಾಗಿ ಮುಂದುವರಿದ ಶೋಧ ಕಾರ್ಯಾಚರಣೆ

ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಪಡೆ ಒಟ್ಟು 15 ತಂಡಗಳನ್ನು ನಿಯೋಜಿಸಿದೆ. ಜಾಮ್‌ನಗರ ಮತ್ತು ರಾಜ್‌ಕೋಟ್‌ನಲ್ಲಿ ತಲಾ ಎರಡು ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ವಲ್ಸಾದ್, ಸೂರತ್, ನವಸಾರಿ, ಗಿರ್ - ಸೋಮನಾಥ್, ಅಮ್ರೆಲಿ, ಭಾವನಗರ, ಜುನಾಗಢ ಬೋಟಾಡ್ ಮತ್ತು ಮೊರ್ಬಿಯಲ್ಲಿ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ. ಗಾಂಧಿನಗರ ಮತ್ತು ವಡೋದರಾದಲ್ಲಿ ತಲಾ ಒಂದು ತಂಡವನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾಗಿದೆ.

ABOUT THE AUTHOR

...view details