ಗಾಂಧಿನಗರ, ಗುಜರಾತ್:ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಮುಂದುವರೆಯುತ್ತಿದೆ. ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುವ ಸಲುವಾಗಿ ಎಲ್ಲಾ ರಾಜ್ಯಗಳು ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೆಲವೊಂದು ರಾಜ್ಯಗಳಲ್ಲಿ ಲಸಿಕೆ ಕಾರ್ಯಕ್ರಮ ನಿರೀಕ್ಷೆಯಷ್ಟು ಯಶಸ್ಸು ಕಾಣುತ್ತಿಲ್ಲ.
ಯಾವುದೇ ರಾಜ್ಯಕ್ಕೆ ಹೋದರೂ ಕೂಡಾ ಲಸಿಕೆ ಕೊರತೆ, ಲಸಿಕೆ ತೆಗೆದುಕೊಳ್ಳುವ ಪ್ರದೇಶದಲ್ಲಿ ಉದ್ದದ ಸರತಿ ಸಾಲುಗಳು ಕಂಡುಬರುತ್ತವೆ. ಆದರೆ ಗುಜರಾತ್ನ ಕಚ್ನಲ್ಲಿ ಈ ರೀತಿಯ ಸನ್ನಿವೇಶ ಕಾಣಲು ಸಾಧ್ಯವಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಒಮ್ಮೆ ಹೇಳಿದ್ದರು.
ಅಮಿತಾಬ್ ಬಚ್ಚನ್ ಹೀಗೆ ಹೇಳಿದ್ದೇಕೆ..?
ಯಾವುದೇ ರಾಜ್ಯಕ್ಕೆ ಹೋದರೂ ವ್ಯಾಕ್ಸಿನೇಷನ್ ಕೇಂದ್ರದ ಮುಂದೆ ಸರತಿ ಸಾಲು ಕಾಯಂ. ಒಮ್ಮೊಮ್ಮೆ ವ್ಯಾಕ್ಸಿನ್ ಖಾಲಿಯಾಗುವ ಸಂದರ್ಭಗಳು ಬಂದೊದಗುತ್ತವೆ. ಆದರೆ ಕಚ್ ಜಿಲ್ಲೆಯ ಭುಜ್ನಲ್ಲಿ ವ್ಯಾಕ್ಸಿನೇಷನ್ ಮಾಡಲು ಹೊಸ ಮಾರ್ಗ ಕಂಡುಕೊಳ್ಳಲಾಗಿದೆ.
ಭುಜ್ನ ಆರ್ಡಿ ವರ್ಸಾನಿ ಹೈಸ್ಕೂಲ್ ಗ್ರೌಂಡಿನಲ್ಲಿ ವ್ಯಾಕ್ಸಿನೇಷನ್ಗೆ ವ್ಯವಸ್ಥೆ ಮಾಡಲಾಗಿದೆ. ಕೋವಿನ್ ವೆಬ್ಸೈಟ್ ಅಥವಾ ಆರೋಗ್ಯ ಸೇತು ಅಪ್ಲಿಕೇಷನ್ನಲ್ಲಿ ನೋಂದಾಯಿಸಿಕೊಂಡವರಿಗೆ ಇಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತದೆ.