ಕರ್ನಾಟಕ

karnataka

ETV Bharat / bharat

ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ; 241 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, 35 ರಲ್ಲಿ ಕಾಂಗ್ರೆಸ್​​ಗೆ ಲೀಡ್​ - Gujarat poll counts

ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ಪ್ರಸ್ತುತ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ ಎಂಟು ಕ್ಷೇತ್ರಗಳಲ್ಲಿ ಲೀಡ್​ ಪಡೆದಿದ್ದು, ಎಐಎಂಐಎಂ ಸಹ ಮುನ್ನಡೆಯಲ್ಲಿದ್ದು, ಖಾತೆ ತೆರೆಯಲು ಸನ್ನದ್ಧವಾಗಿದೆ

ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ; 58 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ; 58 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

By

Published : Feb 23, 2021, 1:27 PM IST

ಅಹಮದಾಬಾದ್:ಗುಜರಾತ್‌ ಪಾಲಿಕೆ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ಪ್ರಸ್ತುತ ಬಿಜೆಪಿ ಮುನ್ನಡೆ ಸಾಧಿಸಿದೆ. 241 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ನವಾ ವಡಾಜ್, ಜಮ್‌ಜೋಧ್‌ಪುರ, ಥಾಲ್ಟೇಜ್, ಸೈಜ್‌ಪುರ, ವಸ್ತ್ರಾಪುರ, ಅಸರ್ವಾ ಹಾಗೂ ನವರಂಗ್‌ಪುರ ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷ ಮುನ್ನಡೆ ಸಾಧಿಸದೆ. ದರಿಯಾಪುರ, ಚಂದ್‌ಖೇಡ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು ಮುನ್ನಡೆ ಕಾಯ್ದುಕೊಂಡಿದೆ ಮತ್ತು ಬೆಹ್ರಾಮ್‌ಪುರದಲ್ಲಿ ಎಐಎಂಐಎಂ ಮುನ್ನಡೆಯಲ್ಲಿದೆ.

ಒಟ್ಟಾರೆ 576 ಸ್ಥಾನಗಳಲ್ಲಿ ಬಿಜೆಪಿ 241 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದರೆ, ಕಾಂಗ್ರೆಸ್​ 35 ಸ್ಥಾನಗಳನ್ನ ತಮ್ಮ ಮಡಿಲಿಗೆ ಹಾಕಿಕೊಳ್ಳುವ ಸಾಧ್ಯತಗಳಿವೆ. ಇನ್ನು ಆಪ್​ 5 ಹಾಗೂ ಎಐಎಂಐಎಂ 4 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿವೆ.

ಮೊದಲ ಬಾರಿ ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಆಮ್‌ ಆದ್ಮಿ ಪಕ್ಷವು ಸೂರತ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹಿಂದಿಕ್ಕಿದ್ದು, ಮುನ್ನಡೆ ಸಾಧಿಸಿದೆ. ಅಹಮದಾಬಾದ್, ಸೂರತ್, ರಾಜ್‌ಕೋಟ್, ವಡೋದರಾ, ಭಾವನಗರ್ ಹಾಗೂ ಜಾಮನಗರ್‌ ಪಾಲಿಕೆಗಳ 144 ವಾರ್ಡ್‌ಗಳ 576 ಸ್ಥಾನಗಳಿಗೆ ಫೆಬ್ರವರಿ 21ರಂದು ಚುನಾವಣೆ ನಡೆದಿತ್ತು. ಈ ಎಲ್ಲ ನಗರ ಪಾಲಿಕೆಗಳಲ್ಲೂ ಸದ್ಯ ಬಿಜೆಪಿಯ ಆಡಳಿತವಿದೆ.

ABOUT THE AUTHOR

...view details