ಮೊರ್ಬಿ (ಗುಜರಾತ್): ಗುಜರಾತ್ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ದುರಂತದಲ್ಲಿ ಗಾಯಗೊಂಡವರನ್ನು ಮೋರ್ಬಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ, ದುರಂತ ಸಂಭವಿಸಿದ ಮಚ್ಚು ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶ್ವಿನ್ ಮೆಹ್ರಾ ಮಾತನಾಡಿ, ಘಟನೆ ನಿನ್ನೆ ಸಂಜೆ ಸುಮಾರು 6.30ಕ್ಕೆ ನಡೆಯಿತು. 15 ರಿಂದ 20 ತುಂಟ ಮಕ್ಕಳು ತೂಗು ಸೇತುವೆಯನ್ನು ಅಲ್ಲಾಡಿಸುತ್ತಿದ್ದರು. ಮೂರು ಬಾರಿ ಭಾರಿ ಪ್ರಮಾಣದ ಸದ್ದು ಕೇಳಿ ಬಂತು. ಬಳಿಕ ಒಮ್ಮಿಂದೊಮ್ಮೆಲೆ ಸೇತುವೆ ಮುರಿದುಬಿತ್ತು ಎಂದರು.