ಕರ್ನಾಟಕ

karnataka

ETV Bharat / bharat

ಗುಜರಾತ್​ ವಿಧಾನಸಭೆಯಲ್ಲಿ ಬಿಬಿಸಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ವಾನುಮತದ ನಿರ್ಣಯ - ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವ ಮೂಲಕ

ಜಾಗತಿಕ ಮಟ್ಟದಲ್ಲಿ ಭಾರತ, ಗುಜರಾತ್​, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿಗೆ ಧಕ್ಕೆ ತರಲು ಯತ್ನ ಆರೋಪ- ಬಿಬಿಸಿ ವರದಿ ವಿರುದ್ಧ ಕ್ರಮಕ್ಕೆ ಆಗ್ರಹ- ಗುಜರಾತ್​ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ

gujarat-legislative-assembly-passed-a-unanimous-resolution-demanding-action-against-bbc
gujarat-legislative-assembly-passed-a-unanimous-resolution-demanding-action-against-bbc

By

Published : Mar 11, 2023, 12:33 PM IST

ಗಾಂಧಿನಗರ: 2002ರಲ್ಲಿ ಗುಜರಾತ್​​ನ ಗೋಧ್ರಾ ಗಲಭೆಯ ಕುರಿತು ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವ ಮೂಲಕ ಬಿಬಿಸಿ ಮಾಧ್ಯವು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುವ ಮೂಲಕ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆ ಬಿಬಿಸಿ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಗುಜರಾತ್​ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಈ ವೇಳೆ ಸದನದಲ್ಲಿ ವಿಪಕ್ಷ ಕಾಂಗ್ರೆಸ್​ ಸದಸ್ಯರು ಹಾಜರಿರಲಿಲ್ಲ.

ಬಿಬಿಸಿ ವಿರುದ್ಧ ಸರ್ವಾನುಮತ ನಿರ್ಣಯ ಕೈಗೊಳ್ಳುವ ವೇಳೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​, ಎಲ್ಲಾ ಸಚಿವರು ಸೇರಿದಂತೆ ಬಿಜೆಪಿಯ ಶಾಸಕರು ಸದನದಲ್ಲಿ ಹಾಜರಿದ್ದರು. ಎಲ್ಲಾ ಕಾಂಗ್ರೆಸ್​ ಸದಸ್ಯರನ್ನು ಸದನದಿಂದ ಅಮಾನತು ಮಾಡಿದ ಮರುದಿನ ಅವರ ಗೈರಿನಲ್ಲಿ ಧ್ವನಿ ಮತದ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ. ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಬಿಜೆಪಿ ಶಾಸಕ ವಿಪುಲ್​ ಪಟೇಲ್​ ಖಾಸಗಿ ನಿರ್ಣಯ ಮಂಡಿಸಿದರು.

ಈ ನಿರ್ಣಯ ಕುರಿತು ಮಾತನಾಡಿದ ಬಿಜೆಪಿ ಶಾಸಕ ಮನಿಶ್​ ವಕಿಲ್​, ಗೋಧ್ರಾ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಅಲ್ಲದೇ ಗಲಭೆ ತನಿಖೆಗೆ ನೇಮಕವಾದ ಎಸ್​ಐಟಿ ಕೂಡ ರಾಜ್ಯ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದೆ. ಆದರೂ ಕೆಲವು ಎನ್​ಜಿಒಗಳು ಬಿಬಿಸಿ ಮೂಲಕ ಗುಜರಾತ್​ ಮತ್ತು ಭಾರತದ ವರ್ಚಸ್ಸಿಗೆ ಜಾಗತಿಕ ಮಟ್ಟದಲ್ಲಿ ಕಳಂಕ ತರುವ ಕೆಲಸ ಮಾಡುತ್ತಿದೆ ಎಂದರು. ಈ ವೇಳೆ ಹಲವು ಬಿಜೆಪಿ ಶಾಸಕರು ಕೂಡ ಈ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದರು.

'ಇಂಡಿಯಾ: ದಿ ಮೋದಿ ಕ್ವಶ್ಚನ್​' ಹೆಸರಿನಲ್ಲಿ ಬಿಬಿಸಿ ವಿವಾದ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದು, ಈ ಸಾಕ್ಷ್ಯಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 2002ರಲ್ಲಿ ಗೋಧ್ರಾ ರೈಲಿನಲ್ಲಿ ನಡೆದ ಸಜೀವ ದಹನ ಮತ್ತು ನಂತರದ ಬೆಳವಣಿಗೆ ಕುರಿತು ಉಲ್ಲೇಖಿಸಲಾಗಿದೆ. ಈ ಸಾಕ್ಷ್ಯಚಿತ್ರ ಭಾರತದ ವರ್ಚಸ್ಸಿಗೆ ಜಾಗತಿಕ ಮಟ್ಟದಲ್ಲಿ ಕಳಮಕ ತರುವ ಕೆಲಸವಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಮೊದಲ ಭಾಗದ ಬಿಬಿಸಿ ಸಾಕ್ಷ್ಯಚಿತ್ರವನ್ನು 2023ರ ಜನವರಿ 17ರಂದು ಬಿಡುಗಡೆ ಮಾಡಲಾಗಿತ್ತು. ಎರಡನೇ ಭಾಗವನ್ನು 2023ರ ಜನವರಿ 24ರಂದು ಬಿಡುಗಡೆ ಮಾಡಲಾಗಿತ್ತು. ಎರಡು ಭಾಗಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇನ್ನು, ಈ ಕುರಿತು ಸದನದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಅಮಿತ್​ ಠಾಕೂರ್​, 20 ವರ್ಷದ ಹಳೆಯ, ಜನರಿಂದ ಮರೆತು ಹೋಗಿರುವ ವಿಚಾರವನ್ನು ಮತ್ತೆ ಜೀವಂತಗೊಳಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಇದು ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರಗೊಳಿಸುವ ಸಂಚು ಆಗಿದೆ ಎಂದು ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಗೋಧ್ರಾ ಹತ್ಯಾಕಾಂಡದ ದಿನದಂದು ಕರಸೇವಕರು ಅಯೋಧ್ಯೆಗೆ ಭೇಟಿ ನೀಡುವಾಗ ಕೇವಲ ಎಸ್​6 ಮತ್ತು ಎಸ್​7 ಬೋಗಿಗಳಿಗೆ ಮಾತ್ರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆ ತಿಳಿದಾಕ್ಷಣ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆರೋಗ್ಯ ಸಚಿವರು ಮತ್ತು ಗೃಹ ಸಚಿವರು ಸ್ಥಳಕ್ಕೆ ಧಾವಿಸಿದರು. ಆದರೆ, ಮಹಿಳೆಯರು ಮತ್ತು ಮಕ್ಕಳ ಪ್ರಾಣ ಉಳಿಯಲಿಲ್ಲ ಎಂದರು. ಸಂಕಷ್ಟದ ಸಮಯದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡ ನಾಯಕನ ವಿರುದ್ಧ ಸುಳ್ಳು ಸಾಕ್ಷ್ಯಚಿತ್ರವನ್ನು ಬಿಬಿಸಿ ಬಿಡುಗಡೆ ಮಾಡಿದೆ ಎಂದು ಗುಜರಾತ್​ ಗೃಹ ಸಚಿವ ಹರ್ಷ ಸಂಘ್ವಿ ಕೂಡ ಸದನದಲ್ಲಿ ತಿಳಿಸಿದರು.

ಇದನ್ನೂ ಓದಿ: ತೇಜಸ್ವಿ ಯಾದವ್ ಮೇಲೆ ಇಡಿ ದಾಳಿ: ಕೇಂದ್ರದ ವಿರುದ್ಧ ಖರ್ಗೆ ಕಿಡಿ

ABOUT THE AUTHOR

...view details