ಅಹಮದಾಬಾದ್:ಗುಜರಾತ್‌ನಲ್ಲಿ ಜೂನಿಯರ್ ಕ್ಲರ್ಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವು ತೆಲಂಗಾಣದ ಹೈದರಾಬಾದ್ ನಗರಕ್ಕೂ ನಂಟಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪ್ರದೀಪ್ ನಾಯಕ್ ಎಂಬುವರಿಗೆ ಪ್ರಶ್ನೆ ಪತ್ರಿಕೆ ಪ್ರತಿಯನ್ನು ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ. ಆರೋಪಿ ಪ್ರದೀಪ್ ಅದನ್ನು ಮುರಾರಿ ಪಾಸ್ವಾನ್ ಮತ್ತು ನರೇಶ್ ಮೊಹಾಂತಿಗೆ ನೀಡಲು ನಿರ್ಧರಿಸುತ್ತಾನೆ. ಮುರಾರಿ ಹಾಗೂ ಕಮಲೇಶನು ಮೊಹಮ್ಮದ್ ಫಿರೋಜ್‌ಗೆ ನೀಡಲು ನಿರ್ಧರಿಸುತ್ತಾನೆ. ಫಿರೋಜ್ ಈ ಪ್ರಶ್ನೆ ಪತ್ರಿಕೆಯನ್ನು ಸರ್ವೇಶ್‌ಗೆ ಹಾಗೂ ಸರ್ವೇಶ್ ಇದನ್ನು ಮಿಂಟುಗೆ ನೀಡಬೇಕಾಗಿತ್ತು. ಮಧ್ಯವರ್ತಿಗಳ ನಡುವೆ ಪ್ರಶ್ನೆ ಪತ್ರಿಕೆ ಹರಿದಾಡಿತ್ತು. ಮಧ್ಯವರ್ತಿಗಳು ಈ ಪ್ರಶ್ನೆ ಪತ್ರಿಕೆಯನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯೋಚಿಸಿದ್ದರು.
ಕೆಎಲ್ ಹೈಟೆಕ್ ಪ್ರಿಂಟಿಂಗ್ ಪ್ರೆಸ್ ಏಜೆನ್ಸಿ:ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಯನ್ನು ವಡೋದರಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಗುಜರಾತ್ ಎಟಿಎಸ್ 12 ದಿನಗಳವರೆಗೆ ಕಸ್ಟಡಿಗೆ ಪಡೆದುಕೊಳ್ಳಾಗಿದೆ. ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಿವರಗಳ ಪ್ರಕಾರ, ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಮೂಲವು ಹೈದರಾಬಾದ್‌ನಲ್ಲಿದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ರಸ್ತೆಯ ರಸ್ತೆ ಸಂಖ್ಯೆ 36ರಲ್ಲಿರುವ ಕೆಎಲ್ ಹೈಟೆಕ್ ಪ್ರಿಂಟಿಂಗ್ ಪ್ರೆಸ್ ಏಜೆನ್ಸಿಯ ಟೀ ಸ್ಟಾಲ್ ಬಳಿ ಪ್ರಶ್ನೆ ಪತ್ರಿಕೆ ಡೀಲ್ ನಡೆದಿದೆ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುವ ಶ್ರದ್ಧಾಕರ್ ಅಲಿಯಾಸ್ ಜೀತ್ ಲುಹಾ ಮತ್ತು ಪ್ರದೀಪ್ ನಾಯಕ್ ಪರಸ್ಪರ ಭೇಟಿಯಾಗಿದ್ದರು. 20 ದಿನಗಳ ಹಿಂದೆ ಪ್ರಶ್ನೆ ಪತ್ರಿಕೆಯನ್ನು ಪ್ರೆಸ್ನಿಂದ ಹೊರಗಡೆ ತೆಗೆದುಕೊಂಡು ಬಂದು ಟೀ ಅಂಗಡಿಯಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡಿದ್ದರು.
ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ನಿರ್ಧಾರ: ನಂತರ ಈ ಪ್ರಕರಣದಲ್ಲಿ ಮಿಂಟು ಕೂಡಾ ಸೇರಿಕೊಂಡಿದ್ದಾನೆ. ಮಿಂಟು ಬರೋಡದ ಭಾಸ್ಕರ್ ಚೌಧರಿ ಅವರಿಗೆ ಪ್ರಶ್ನೆ ಪತ್ರಿಕೆಯನ್ನು ನೀಡಿದ್ದಾರೆ. ಚೌಧರಿ ಪತ್ರಿಕೆಯನ್ನು ಕೇತನ್ ಬರೋಟ್, ರಾಜ್ ಬರೋಟ್, ಅನಿಕೇತ್ ಭಟ್ ಮತ್ತು ಇಮ್ರಾನ್ಗೆ ಮಾರಾಟ ಮಾಡಲು ನಿರ್ಧರಿಸಿದ್ದರು. ಕೇತನ್ ಬರೋಟೆ ರಾಜ್ ಮತ್ತು ಅನಿಕೇತ್ ಭಟ್ ಅವರು ಪ್ರಶ್ನೆ ಪತ್ರಿಕೆಯನ್ನು ಹಾರ್ದಿಕ್ ಮತ್ತು ಪ್ರಣಯ್ ಶರ್ಮಾ ಅವರಿಗೆ ತಲುಪಿಸಿದರು.
ನರೇಶ್ ಮೊಹಂತಿ ಈ ಪತ್ರಿಕೆಯನ್ನು ತನ್ನ ಸಂಬಂಧಿಕರಿಗೆ ಮಾರಾಟ ಮಾಡಲು ಬಯಸಿದ್ದರು. ಮುಖೇಶ್ ಮತ್ತು ಪ್ರಭಾತ್ ಕುಮಾರ್ ಕೂಡ ತಮ್ಮ ಪರಿಚಯದವರಿಗೆ ಪ್ರಶ್ನೆ ಪತ್ರಿಕೆಯನ್ನು ಮಾರಲು ಮುಂದಾಗಿದ್ದರು. ಪ್ರಿಂಟಿಂಗ್ ಪ್ರೆಸ್‌ನ ಹೊರಗಿನ ಕೆಲಸಗಾರರಿಂದ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡ ಪ್ರದೀಪ್ ಅದನ್ನು ವಡೋದರದ ಅಟ್ಲಾದರ ಬಿಲ್ ರಸ್ತೆಯಲ್ಲಿರುವ ಪ್ರಮುಖ್ ಬಜಾರ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಸ್ಟಾಕ್‌ವೈಸ್ ಟೆಕ್ನಾಲಜಿ ಕಚೇರಿಯಲ್ಲಿ ಚೌಧರಿಗೆ ತಲುಪಿಸಲು ಯೋಜಿಸಲಾಗಿತ್ತು.
15 ಆರೋಪಿಗಳ ಬಂಧನ:ಚೌದರಿಯವರ ಪ್ರಶ್ನೆ ಪತ್ರಿಕೆಯ ನಕಲು ಪ್ರತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯದ 15 ಆರೋಪಿಗಳನ್ನು ಬಂಧಿಸಲಾಗಿದೆ. 15 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಬೇಕಿದೆ. ಇವರೆಲ್ಲರ ಹೊರತಾಗಿ ಇನ್ನು ಕೆಲವು ಆರೋಪಿಗಳ ಕೈವಾಡವಿರುವ ಸಾಧ್ಯತೆ ಹೆಚ್ಚಿದೆ. ಪೊಲೀಸ್ ತನಿಖೆ ಚುರುಕುಗೊಂಡಿದೆ.