ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಸರಿ ಪಕ್ಷದ ದಿಗ್ಗಜರು ನಡೆಸಿದ ಪ್ರಬಲ ಪ್ರಚಾರದಿಂದ ಈ ಗೆಲುವು ಸಾಧ್ಯವಾಗಿದ್ದರೂ, ಮೋದಿಯವರು ವೈಯಕ್ತಿಕ ಮನವಿಗೆ ಗುಜರಾತ್ ಮತದಾರರು ಮಣೆ ಹಾಕಿದ್ದಾರೆ ಎಂಬುವುದು ಈ ಭರ್ಜರಿ ಗೆಲುವಿನಿಂದ ಸ್ಪಷ್ಟ. ಬಿಜೆಪಿ ಪಡೆದ ಶೇಕಡಾವಾರು ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತದಾರರು ಮೋದಿಗೆ ಜೈಕಾರ ಹಾಕಿದ್ದಾರೆ.
ಇಂದಿನ ಚುನಾವಣಾ ಫಲಿತಾಂಶ ನಂತರ ಗುಜರಾತ್‌ನಲ್ಲಿ ಪ್ರತಿಪಕ್ಷಗಳು ಧೂಳೀಪಟವಾಗಿವೆ. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಗೆ ಯಾವ ಎದುರಾಳಿಯೂ ಇಲ್ಲದೇ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ. ಸದ್ಯ ಪ್ರತಿಪಕ್ಷಗಳು ಹೊಂದಿರುವ ಸದಸ್ಯರ ಸಂಖ್ಯೆಯನ್ನು ಗಮನಿಸಿದರೆ ಮುಂದಿನ ಐದು ವರ್ಷಗಳಲ್ಲಿ ಸದನದಲ್ಲಿ ಆಡಳಿತ ಪಕ್ಷದ ಎದುರಿನ ಗ್ಯಾಲರಿಯಿಂದ(ವಿಪಕ್ಷ) ಅಪರೂಪಕ್ಕೆ ಧ್ವನಿ ಕೇಳಿಬರುವಂತಿದೆ.
ಕೆಲಸ ಮಾಡದ ಆಡಳಿತ ವಿರೋಧಿ ಅಲೆ: ದಲಿತರ ಸಮಸ್ಯೆ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ ಅಥವಾ ಆಡಳಿತ ವಿರೋಧಿ ಅಲೆ ಸೇರಿ ಯಾವುದೂ ಕೂಡ ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ. ಬಿಜೆಪಿಯ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಅಂಶಗಳನ್ನು ಮೋದಿ ಎಂಬ ಹೆಸರಿನ ಮಂತ್ರವು ಮರೆಮಾಚುವಲ್ಲಿ ಯಶಸ್ಸು ಕಂಡಿದೆ. ಪಕ್ಷ ಬಿಡಿ, ನಾನು ಈ ಮಣ್ಣಿನ ಮಗನಾಗಿರುವುದರಿಂದ ನನಗೆ ಮತ ನೀಡಿ ಎಂದು ತಮ್ಮದೇ ಪಕ್ಷದ ತಳಮಟ್ಟದ ಕಾರ್ಯಕರ್ತರು, ಪ್ರಮುಖರಿಗೂ ಮೋದಿ ಮನವಿ ಮಾಡಿದ್ದರು. ಇದಕ್ಕೆ ಫಲ ಸಿಕ್ಕಿದೆ.
ಚದುರಿ ಹೋದ ಮತಗಳು:ಪ್ರಮುಖವಾಗಿ ಬಿಜೆಪಿಯ ವಿರೋಧ ಪಕ್ಷಗಳಲ್ಲಿ ಮತಗಳು ಚದುರಿ ಹೋಗಿವೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ಎಐಎಂಐಎಂ ಅಭ್ಯರ್ಥಿಗಳಲ್ಲೇ ಮತಗಳು ಹರಿದು ಹಂಚಿ ಹೋಗಿವೆ. ಕೆಲವು ಕ್ಷೇತ್ರಗಳಲ್ಲಿ ಹಲವಾರು ಮುಸ್ಲಿಂ ಅಭ್ಯರ್ಥಿಗಳಿದ್ದರೂ, ಇದು ಮತ ವಿಭಜನೆಯ ಮೂಲ ತಂತ್ರವೇ ಆಗಿತ್ತು. ಆದರೆ, ಇದರಿಂದ ಅಸ್ಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸೇರಿ ಯಾವುದೇ ವಿರೋಧ ಪಕ್ಷಗಳಿಗೆ ಇದರಿಂದ ಪ್ರಯೋಜನವಾಗಿಲ್ಲ.
ಅಲ್ಲದೇ, ಒಂದಲ್ಲ ಒಂದು ಕಾರಣಕ್ಕೆ ಓವೈಸಿ ಗುಜರಾತ್‌ಗೆ ನಿತ್ಯ ಭೇಟಿ ನೀಡುತ್ತಿರುವ ಬಗ್ಗೆ ಬಿಜೆಪಿ ಗಮನ ಹರಿಸಿದ್ದರೂ, ಇದರ ಬೆದರಿಕೆಗೆ ಇದ್ದು ಕಾಂಗ್ರೆಸ್‌ಗೆ. ಇದೇ ವೇಳೆ ಸೌರಾಷ್ಟ್ರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಭಾವವನ್ನು ತಗ್ಗಿಸಲು ಸ್ವತಃ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ಕೆ ಇಳಿದಿದ್ದರು.