ನವದೆಹಲಿ:ಗುಜರಾತ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ಜನತೆಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. "ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರಂತಹ ಮಹಾನ್ ನಾಯಕರ ಜನ್ಮ ಸ್ಥಳ ಹಾಗೂ ಭಾರತದ ಪ್ರಗತಿಗೆ ಗುಜರಾತ್ ವಿಶೇಷ ಕೊಡುಗೆ ನೀಡಿದೆ. ಗುಜರಾತ್ ದಿನದಂದು ಗುಜರಾತ್‌ನ ಎಲ್ಲಾ ನಿವಾಸಿಗಳಿಗೆ ಶುಭಾಶಯಗಳು'' ಎಂದು ಸೋಮವಾರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಗುಜರಾತ್ ತನ್ನ ಸಂಸ್ಥಾಪನಾ ದಿನವನ್ನು ಮೇ 1ರಂದು "ಗುಜರಾತ್ ಗೌರವ ದಿನ" ಎಂದು ಆಚರಿಸುತ್ತದೆ.
ರಾಜ್ಯದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಜನರಿಗೆ ಶುಭಾಶಯ ಕೋರಿದರು. ''ಗುಜರಾತ್ ಸ್ಥಾಪನಾ ದಿನದ ಶುಭಾಶಯಗಳನ್ನು ರಾಜ್ಯದ ಜನರಿಗೆ ಕೋರಿದರು. ''ಗುಜರಾತ್ ತನ್ನ ಸರ್ವತೋಮುಖ ಪ್ರಗತಿ ಮತ್ತು ಅದರ ವಿಶಿಷ್ಟ ಸಂಸ್ಕೃತಿಯಿಂದಲೇ ಒಂದು ವಿಶಿಷ್ಟವಾದ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯವು ಅಭಿವೃದ್ಧಿಯ ಹೊಸ ಎತ್ತರಗಳನ್ನು ಏರಲು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
ಗುಜರಾತ್ ಅಭಿವೃದ್ಧಿಯ ಮಾದರಿ ರಾಜ್ಯ- ಸಿಎಂ ಭೂಪೇಂದ್ರ ಪಟೇಲ್:''ನಮ್ಮ ಪ್ರಧಾನಿಯವರ ನೇತೃತ್ವದಲ್ಲಿ ನಾವು ಅಮೃತ್ ಕಾಲ್ ಅನ್ನು ಆಚರಿಸುತ್ತಿದ್ದೇವೆ. ಅಮೃತ್ ಕಾಲ್ ಈ ಗುಜರಾತ್ ಸಂಸ್ಥಾಪನಾ ದಿನದ ವಿಶೇಷ ಪ್ರಾಮುಖ್ಯತೆಯ ದಿನವಾಗಿದೆ. 1960ರ ಮೇ 1ರಂದು ಗುಜರಾತ್ ಪ್ರತ್ಯೇಕ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಗುಜರಾತಿಗರು ಅದರತ್ತ ಮುನ್ನಡೆದಿದ್ದಾರೆ. ಅಭಿವೃದ್ಧಿ, ಏಕಾಏಕಿ ಭೂಕಂಪ, ಪ್ರವಾಹ ಅಥವಾ ಕೋವಿಡ್ ಸಾಂಕ್ರಾಮಿಕವಾಗಿದ್ದರೂ, ಗುಜರಾತಿಗರು ಪ್ರತಿಯೊಂದು ವಿಪತ್ತನ್ನೂ ದೃಢಸಂಕಲ್ಪದಿಂದ ಎದುರಿಸಿದ್ದಾರೆ. ಪ್ರಧಾನಿಯವರ ನೇತೃತ್ವದಲ್ಲಿ ಗುಜರಾತ್ ಅಭಿವೃದ್ಧಿಯ ಮಾದರಿ ರಾಜ್ಯ ಎಂದು ದೇಶ ಹಾಗೂ ಜಗತ್ತಿಗೆ ತೋರಿಸಿದೆ. ಅಭಿವೃದ್ಧಿ ಏನು ಅಂದ್ರೆ, "ವಿಕಾಸ್ ಕಿ ರಾಜನೀತಿ" ಆಗುತ್ತದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಭಿಮತ ವ್ಯಕ್ತಪಡಿಸಿದರು.
'ಗುಜರಾತ್‌ನ ಗೌರವ ಹೆಚ್ಚಿಸುತ್ತೇವೆ':ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಾಜ್ಯವು ಅಪಾರ ನಂಬಿಕೆಯನ್ನು ತೋರಿಸಿದೆ. ಗುಜರಾತ್‌ನ ಈ ಅಭಿವೃದ್ಧಿಯ ಪಯಣವನ್ನು ಮುಂದುವರಿಸಲು ಭಾರೀ ಜನಾದೇಶವನ್ನು ನೀಡಿದೆ. ಅದಕ್ಕಾಗಿ ನಾವು ಎಲ್ಲ ಜನರ ಪ್ರೀತಿಯ ಋಣವನ್ನು ಸ್ವೀಕರಿಸುತ್ತೇವೆ ಎಂದು ವೈಭವದ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು. ''ಸಾರ್ವಜನಿಕರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ನಾವು ಉಳಿಸಿಕೊಳ್ಳುತ್ತೇವೆ. ನಾವು ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ. ಜೊತೆಗೆ ನಾವು ಗುಜರಾತ್‌ನ ಗೌರವವನ್ನೂ ಹೆಚ್ಚಿಸುತ್ತೇವೆ'' ಎಂದರು.