ಗಾಂಧಿನಗರ (ಗುಜರಾತ್) : ವೊಡಾಫೋನ್-ಐಡಿಯಾ ಕಂಪನಿಯ ದೂರವಾಣಿ ಸೌಲಭ್ಯ ಬಳಸುತ್ತಿದ್ದ ಗುಜರಾತ್ ಸರ್ಕಾರಿ ನೌಕರರು ರಿಲಯನ್ಸ್ ಜಿಯೋಗೆ ವರ್ಗಾವಣೆಯಾಗುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ, ಉದ್ಯೋಗಿಗಳು 37.50 ರೂಪಾಯಿಗೆ ಜಿಯೋ ಮಾಸಿಕ ರೆಂಟಲ್ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆ ಯಾವುದೇ ಮೊಬೈಲ್ ಆಪರೇಟರ್ ಅಥವಾ ಲ್ಯಾಂಡ್‌ಲೈನ್‌ನಲ್ಲಿ ಉಚಿತ ಕರೆ ಸೌಲಭ್ಯ ನೀಡುತ್ತದೆ. ಪ್ರತಿ ತಿಂಗಳು 3,000 SMSಗಳನ್ನು ಉಚಿತವಾಗಿ ಪಡೆಯಬಹುದು. ಸೋಮವಾರದಿಂದಲೇ ಸರ್ಕಾರಿ ನೌಕರರಿಗೆ ಮೊದಲಿದ್ದ ವೊಡಾಫೋನ್-ಐಡಿಯಾ ಸೇವೆ ನಿಲ್ಲಿಸಲಾಗಿದೆ.
ಉದ್ಯೋಗಿಗಳ ಮೊಬೈಲ್ ಸಂಖ್ಯೆಯನ್ನು ರಿಲಯನ್ಸ್ ಜಿಯೋಗೆ ವರ್ಗಾವಣೆ ಮಾಡಲಾಗಿದೆ. ಇದುವರೆಗೆ ಗುಜರಾತ್‌ನಲ್ಲಿ ಸರ್ಕಾರಿ ನೌಕರರ ಅಧಿಕೃತ ಸಂಪರ್ಕ ಸಂಖ್ಯೆ ವೊಡಾಫೋನ್-ಐಡಿಯಾ ಕಂಪನಿಯದ್ದಾಗಿತ್ತು. ಪೋಸ್ಟ್‌ಪೇಯ್ಡ್ ಮೊಬೈಲ್ ಸಂಖ್ಯೆಗಳನ್ನು ನಿರಂತರವಾಗಿ ಬಳಸುತ್ತಿದ್ದರು. ಮೇ 8, 2023 ರಂದು ಗುಜರಾತ್ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದ್ದು, ತಕ್ಷಣವೇ ಜಾರಿಗೆ ಬರುವಂತೆ ಜಿಯೋ ಸಂಖ್ಯೆ ಬಳಸಬೇಕು ಎಂದು ಸೂಚಿಸಲಾಗಿದೆ.