ಅಹಮದಾಬಾದ್ (ಗುಜರಾತ್): ರೈತರು ಸ್ಮಾರ್ಟ್‌ಫೋನ್(smartphone) ಖರೀದಿಸಲು ಗುಜರಾತ್ ಸರ್ಕಾರವು1,500ರೂ. ಆರ್ಥಿಕ ನೆರವು(Gujarat government supports farmers) ನೀಡಲು ನಿರ್ಧರಿಸಿದೆ ಎಂದು ರಾಜ್ಯ ಕೃಷಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಹೆಚ್ಚಿನ ಕ್ಷೇತ್ರಗಳು ಡಿಜಿಟಲೀಕರಣವಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿಯೂ ಡಿಜಿಟಲ್ ಸೇವೆಗಳ ಪ್ರಭುತ್ವ ಬೆಳೆಯುತ್ತಿದ್ದು, ಕೃಷಿ ಆದಾಯವನ್ನು ಹೆಚ್ಚಿಸಲು ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಸ್ಮಾರ್ಟ್‌ಫೋನ್ ಖರೀದಿಸುವಂತೆ ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಕೃಷಿ ಇಲಾಖೆಯು ಹೊರಡಿಸಿದ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಸ್ಮಾರ್ಟ್‌ಫೋನ್ ಒಟ್ಟು ಮೊತ್ತದ ಶೇ .10 ಭಾಗ ಅಂದರೆ ₹1,500 ಸಹಾಯ ಪಡೆಯಲು ಐ–ಖೆದುತ್ ಪೋರ್ಟಲ್‌ನಲ್ಲಿ(i-khedut portal) ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಕೃಷಿ, ರೈತ ಕಲ್ಯಾಣ ಮತ್ತು ಸಹಕಾರ ಇಲಾಖೆ ಶನಿವಾರ ಹೊರಡಿಸಿದ ಸರ್ಕಾರದ ನಿರ್ಣಯ (ಜಿಆರ್)ದಲ್ಲಿ ತಿಳಿಸಿದೆ.