ಅರವಳ್ಳಿ(ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆ 2022ರ ಎರಡನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆಯು ಇಂದು ನಡೆಯುತ್ತಿದೆ. ಕೇಂದ್ರ ಚುನಾವಣಾ ಆಯೋಗವು ವಿವಿಧ ಥೀಮ್‌ಗಳ ಮೇಲೆ ಮತಗಟ್ಟೆಗಳನ್ನು ಸ್ಥಾಪಿಸಿದರೆ ಇಲ್ಲಿನ ಅರಾವಳಿಯ ಪರಿಸರಸ್ನೇಹಿ ಮತಗಟ್ಟೆ ವಿಶೇಷವಾಗಿ ಗಮನ ಸೆಳೆಯಿತು.
ಹಚ್ಚಹಸಿರಿನಿಂದ ಕೂಡಿದ ಮತಗಟ್ಟೆ ಪ್ಲಾಸ್ಟಿಕ್‌ರಹಿತವಾಗಿದೆ. ಇಲ್ಲಿ ಕಾಗದವನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಲಾಗಿದೆ. ಪ್ಲಾಸ್ಟಿಕ್ನಿಂದ ದೂರವಿರುವಂತೆ ಸಂದೇಶ ನೀಡುತ್ತಾ ಜನರನ್ನು ಮತದಾನಕ್ಕೆ ಪ್ರೇರೇಪಿಸುತ್ತಿದೆ.