ಕರ್ನಾಟಕ

karnataka

ETV Bharat / bharat

ಗುಜರಾತ್​ ಚುನಾವಣೆ: ಸೃಜನಶೀಲ ಮತಯಾಚನೆ ಮೂಲಕ ಮೂರು ದಶಕದ ಮತಪ್ರಚಾರ ನೆನಪಿಸಿದ ಅಭ್ಯರ್ಥಿ

ಬಿರುಗಾಳಿ, ಸೈಕ್ಲೊನ್​ ಮತ್ತು ಭಾರಿ ಮಳೆ ಸೇರಿದಂತೆ ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಜನರ ಜಾಗೃತಿಗೊಳಿಸುವ ಉಪಕರಣಗಳನ್ನು ಬಳಕೆ ಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ.

ಗುಜರಾತ್​ ಚುನಾವಣೆ: ಸೃಜನಶೀಲ ಮತಯಾಚನೆ ಮೂಲಕ ಮೂರು ದಶಕನ ಮತಪ್ರಚಾರ ನೆನಪಿಸಿದ ಅಭ್ಯರ್ಥಿ
ಗುಜರಾತ್​ ಚುನಾವಣೆ: ಸೃಜನಶೀಲ ಮತಯಾಚನೆ ಮೂಲಕ ಮೂರು ದಶಕನ ಮತಪ್ರಚಾರ ನೆನಪಿಸಿದ ಅಭ್ಯರ್ಥಿ

By

Published : Nov 25, 2022, 6:49 PM IST

ಸೋಮನಾಥ್​​: ಗುಜರಾತ್ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದೆ. ಸೋಮನಾಥ ವಿಧಾನಸಭಾ ಕ್ಷೇತ್ರದಿಂದ ಡಾ.ಈಶ್ವರ ಸೋನೇರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆಧುನಿಕ ಕಾಲದ ಪ್ರಚಾರ ತಂತ್ರ ಬಿಟ್ಟು ಅವರು ಮೂರು ದಶಕಗಳ ಹಿಂದಿನ ಪಿಎಸ್​ ತಂತ್ರವನ್ನು ನಡೆಸುವ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯುತ್ತ ಕುತೂಹಲ ಮೂಡಿಸಿದ್ದಾರೆ.

ವಿಪತ್ತಿನ ಜಾಗೃತಿ:ಭಾವನಗರದ ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾ ಸ್ವಯಂ ಸೇವಕ ಅರ್ಜನ್​ ಮೆಸ್ವಾನಿಯಾ ಕೂಡ 50 ವರ್ಷದ ಹಿಂದಿನ ಚುನಾವಣಾ ಪ್ರಚಾರ ಸಾಹಿತ್ಯದ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಬ್ಯಾಟರಿ ಬಳಕೆ ಮೈಕ್​ನಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ರಾಜಕೀಯದಲ್ಲಿ ಆಧುನಿಕ ತಂತ್ರಜ್ಞಾನ ಬಿಟ್ಟು ಮೈಕ್ರೋಫೋನ್​ ಮತ್ತು ಸಾರ್ವಜನಿಕ ವ್ಯವಸ್ಥೆ ಬಳಸಿಕೊಂಡು ಪ್ರಚಾರ ನಡೆತ್ತಿರುವುದು ಎಲ್ಲರನ್ನು ಸೆಳೆಯುತ್ತಿದೆ.

ಸಾರ್ವಜನಿಕ ನಿರ್ದೇಶಿಸುವ ವ್ಯವಸ್ಥೆಯ ಚುನಾವಣಾ ಪ್ರಚಾರ: ಬಿರುಗಾಳಿ, ಸೈಕ್ಲೊನ್​ ಮತ್ತು ಭಾರಿ ಮಳೆ ಸೇರಿದಂತೆ ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಜನರನ್ನು ಜಾಗೃತಿಗೊಳಿಸುವ ಉಪಕರಣಗಳನ್ನು ಬಳಕೆ ಮಾಡಿಕೊಂಡು ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ. ಈ ಬಾರಿ ಚುನಾವಣೆಗೆ ಸೋಮನಾಥ್​ ಕ್ಷೇತ್ರದ 182 ಕ್ಷೇತ್ರಗಳಲ್ಲಿ ಈ ಪ್ರಚಾರ ಸಾಮಗ್ರಿ ಬಳಕೆ ಮಾಡಲಾಗುತ್ತದೆ.

ವಿಶೇಷ ಪ್ರಚಾರ: ಡಾ. ಈಶ್ವರ್ ಸೋನೇರಿ ಈ ರೀತಿ ವಿಶೇಷ ಪ್ರಚಾರ ತಂತ್ರ ಬಳಸಿಕೊಂಡು ಜನರ ವಿಶೇಷವಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ ಎಂದು ವೆರಾವಲ್ ಮತದಾರ ಮುಖೇಶ್ ಪ್ರಜಾಪತಿ ತಿಳಿಸಿದ್ದಾರೆ. ಅವರ ಪ್ರಚಾರವೂ ಸಾಕಷ್ಟು ನೇರವಾಗಿರುತ್ತದೆ. ಹೀಗಾಗಿ ಅವರು ಮಾಫಿಯಾ ಮತ್ತು ಇತರ ಸಮಾಜವಿರೋಧಿ ಗುಂಪುಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಭ್ಯರ್ಥಿ ಡಾ. ಈಶ್ವರ ಸೋನೇರಿ ಅವರು ಪ್ರತಿ ಕಾಲ್ನಡಿಗೆ ಮೂಲಕ ವೈಯಕ್ತಿಕ ಪ್ರಚಾರವನ್ನು ನಡೆಸುತ್ತಾರೆ, ಮೂವತ್ತು ವರ್ಷಗಳ ಹಿಂದಿನ ಅದೇ ಪ್ರಚಾರ ತಂತ್ರವನ್ನು ಬಳಸಿಕೊಂಡು ಅವರು ಮತಯಾಚನೆ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಐಜಿ ವಿಕಾಸ್ ವೈಭವ್​ ಮನೆಯಲ್ಲಿ ರಿವಾಲ್ವರ್ ಕಳ್ಳತನ: ಪೊಲೀಸ್​ ಇಲಾಖೆಯಲ್ಲಿ ಸಂಚಲನ

ABOUT THE AUTHOR

...view details