ಅಹಮದಾಬಾದ್ (ಗುಜರಾತ್) : ಕೋವಿಡ್ ನಿಯಂತ್ರಣಕ್ಕೆ ಕೇಂದ್ರ, ರಾಜ್ಯ ಸರ್ಕಾರ ಏನೆಲ್ಲ ಕ್ರಮ ಕೈಗೊಂಡಿದ್ದರೂ, ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಮಧ್ಯೆ ಜನರು ಮಾರ್ಗಸೂಚಿಗಳನ್ನು ಪಾಲಿಸದೆ ಉಡಾಫೆ ತೋರುತ್ತಿದ್ದಾರೆ. ಹಾಗಾಗಿ ಗುಜರಾತ್ ಹೈಕೋರ್ಟ್ ನೀಡಿರುವ ಈ ಒಂದು ಆದೇಶ ಎಲ್ಲರೂ ನಿಯಮ ಅನುಸರಿಸುವಂತೆ ಮಾಡಿದೆ.
ಮಾಸ್ಕ್ ಧರಿಸದವರು ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡಬೇಕು: ಗುಜರಾತ್ ಹೈಕೋರ್ಟ್ - ಗುಜರಾತ್ ಹೈಕೋರ್ಟ್ ಲೇಟೆಸ್ಟ್ ಸುದ್ದಿ
ಮಾಸ್ಕ್ ಧರಿಸದವರು ಕೋವಿಡ್ ಕೇಂದ್ರಗಳಲ್ಲಿ ಸೋಂಕಿತರ ಸೇವೆ ಮಾಡಬೇಕೆಂದು ಗುಜರಾತ್ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ತಪಾಸಣಾ ದರವನ್ನು 1,500 ರಿಂದ 800 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದೆ.

ಸಾರ್ವಜನಿಕ
ಇನ್ನು ಮುಂದೆ ಮಾಸ್ಕ್ ಧರಿಸದವರು ಕೋವಿಡ್ ಕೇಂದ್ರಗಳಲ್ಲಿ ಸೋಂಕಿತರ ಸೇವೆ ಮಾಡಬೇಕೆಂದು ಗುಜರಾತ್ ನ್ಯಾಯಾಲಯ ಮಹತ್ವದ ಆದೇಶವನ್ನು ಹೊರಡಿಸಿದೆ. ಒಂದು ವೇಳೆ ನಿರಾಕರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೆ ಖಾಸಗಿ ಪ್ರಯೋಗಾಲಯಗಳಲ್ಲಿ ಕೊರೊನಾ ತಪಾಸಣಾ ದರವನ್ನು 1,500 ರಿಂದ 800 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದೆ.
ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,09,780 ಕ್ಕೆ ಏರಿದ್ದು, ಈವರೆಗೆ 3,989 ಮೃತಪಟ್ಟಿದ್ದಾರೆ. ನವೆಂಬರ್ವೊಂದರಲ್ಲೇ 36,836 ಪ್ರಕರಣಗಳು ವರದಿಯಾಗಿವೆ.