ಅಹಮದಾಬಾದ್: ಗುಜರಾತ್ನಲ್ಲಿ ಎರಡು ಹಂತಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದ್ದು, ಇಂದು ಆರು ಮಹಾನಗರ ಪಾಲಿಕೆಗಳಿಗೆ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ.
ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್, ಭಾವನಗರ ಮತ್ತು ಜಾಮ್‌ನಗರಗಳಲ್ಲಿ ಪೊಲೀಸ್ ಬಿಗಿ ಭದ್ರತೆ, ಕೋವಿಡ್ ನಿಯಮಗಳೊಂದಿಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಫೆ.28 ರಂದು 81 ಪುರಸಭೆ, 31 ಜಿಲ್ಲಾ ಪಂಚಾಯತ್‌ಗಳು ಮತ್ತು 231 ತಾಲೂಕು ಪಂಚಾಯತ್‌ಗಳಿಗೆ ಮತದಾನ ನಡೆಯಲಿದೆ.
ಇದನ್ನೂ ಓದಿ: ಬಿಜೆಪಿಗೆ ವೋಟ್ ಮಾಡಿ.. ಆಸ್ಪತ್ರೆಯಿಂದಲೇ ಜನರಲ್ಲಿ ಗುಜರಾತ್ ಸಿಎಂ ಮನವಿ..
ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು (ಎಎಪಿ) ಸ್ಪರ್ಧೆಯಲ್ಲಿವೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ಈ ಸ್ಥಳೀಯ ಸಂಸ್ಥೆ ಚುನಾವಣೆ ಬಹುಮುಖ್ಯವಾಗಿದೆ.
ಆರು ಮಹಾನಗರ ಪಾಲಿಕೆಗಳ 577 ಸ್ಥಾನಗಳಿಗೆ ಬಿಜೆಪಿಯಿಂದ 575, ಕಾಂಗ್ರೆಸ್ನಿಂದ 566, ಎಎಪಿಯಿಂದ 470, ಎನ್‌ಸಿಪಿಯಿಂದ 91, ಇತರ ಪಕ್ಷಗಳಿಂದ 353 ಹಾಗೂ 228 ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 2,276 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಮಿತ್ ಶಾರಿಂದ ವೋಟಿಂಗ್
ಕೇಂದ್ರ ಗೃಹಸಚಿವ ಅಮಿತ್ ಶಾ ಕುಟುಂಬ ಸಮೇತರಾಗಿ ಬಂದು ಅಹಮದಾಬಾದ್‌ನ ನಾರನ್‌ಪುರ ಉಪ ವಲಯ ಕಚೇರಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.