ಅಹಮದಾಬಾದ್(ಗುಜರಾತ್):ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಗುಜರಾತ್ಗೆ ಭೇಟಿ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಸಂಸದರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಪ್ರಧಾನಿ ಮೋದಿ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ತೇಜಸ್ವಿ ಸೂರ್ಯ ಗುಜರಾತ್ಗೆ ಭೇಟಿ ನೀಡಿದ್ದರು. ಈ ವೇಳೆ ಗುಜರಾತ್ನ ಭಾರತೀಯ ಜನತಾ ಪಾರ್ಟಿಯು ಯುವ ಮೋರ್ಚಾ ಅದ್ಧೂರಿ ಸ್ವಾಗತ ಕೋರಿದೆ.
ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತೇಜಸ್ವಿ ಸೂರ್ಯ ಬರುತ್ತಿದ್ದಂತೆ ಪಟಾಕಿ ಹಚ್ಚಿ ಬರಮಾಡಿಕೊಂಡಿದ್ದಾರೆ. ಈ ವೇಳೆ ಗುಜರಾತ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರಶಾಂತ್ ಕೋರಟ್ ಹಾಗೂ ಇತರ ಮುಖಂಡರು ಸ್ಥಳದಲ್ಲಿ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಸಂಸದ ತೇಜಸ್ವಿ ಸೂರ್ಯಗೆ ಅದ್ಧೂರಿ ಸ್ವಾಗತ ಬಿಜೆಪಿ ಯುವ ಮೋರ್ಚಾ ಸಮ್ಮೇಳನದಲ್ಲಿ ಹಾಜರಾದ ತೇಜಸ್ವಿ ಸೂರ್ಯ, ಸೇವಾ ಸಮರ್ಪಣ್ ಅಭಿಯಾನದ ಅಡಿಯಲ್ಲಿ ಒಲಿಂಪಿಕ್ ಸ್ಪರ್ಧಿಗಳು, ಪ್ರೊಫೆಸರ್ಗಳು, ವಕೀಲರು, ಉದ್ಯಮಿಗಳು, ಪತ್ರಕರ್ತರ ಜೊತೆ ಸಂವಾದ ನಡೆಸಿದ್ದಾರೆ.
ಜೊತೆಗೆ ಯುವಕರಿಗೆ ಸಂಬಂಧಿಸಿದ ಕ್ರೀಡೆ, ಉದ್ಯೋಗ, ಶಿಕ್ಷಣದ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ, ಅಹಮದಾಬಾದ್ನಲ್ಲಿ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಯುವ ಮೋರ್ಚಾ ಮಾಡಿದ ಕೆಲವು ಜನೋಪಕಾರಿ ಕೆಲಸಗಳನ್ನು ಅನಾವರಣಗೊಳಿಸಿದರು.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಗುಜರಾತ್ಗೆ ಭೇಟಿ ನೀಡಿದ್ದರಿಂದ ನನಗೆ ರೋಮಾಂಚನವಾಗುತ್ತಿದೆ. ರಕ್ತದಾನ ಶಿಬಿರ, ಲಸಿಕೆ ಶಿಬಿರ, ಸರ್ಕಾರಿ ಯೋಜನೆಗಳ ಪ್ರಚಾರದಂತಹ ಕಾರ್ಯಗಳಿಗೆ ಯುವ ಮೋರ್ಚಾವನ್ನು ಶ್ಲಾಘಿಸಿದರು.
ಇಷ್ಟೇ ಅಲ್ಲದೇ ನರೇಂದ್ರ ಮೋದಿ ಹುಟ್ಟೂರಿಗೆ ಭೇಟಿ ನೀಡಿದ್ದ ಸೂರ್ಯ, ಮೋದಿ ಅವರ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಿಗೆ ತೆರಳಿದರು. ಇಂದು ಕೆವಾಡಿಯಾದಲ್ಲಿರುವ ಏಕತೆಯ ಮೂರ್ತಿ ವೀಕ್ಷಿಸಲು ತೇಜಸ್ವಿ ಸೂರ್ಯ ತೆರಳುತ್ತಿದ್ದಾರೆ.
ಇದನ್ನೂ ಓದಿ: ಷರತ್ತುಗಳ ಮೇಲೆ ಹೆಣ್ಣುಮಕ್ಕಳು ಶಾಲೆಗೆ ಹೋಗಬಹುದು: ತಾಲಿಬಾನ್ ಅಧಿಕಾರಿ