ಗಾಂಧಿನಗರ(ಗುಜರಾತ್):ಸಾರ್ವಜನಿಕ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟವನ್ನು ನಿಷೇಧಿಸಲು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (Rajkot Municipal Corporation) ನವೆಂಬರ್ 9ರಂದು ಮೊದಲು ನಿರ್ಧರಿಸಿದೆ. ಈ ನಿರ್ಧಾರದ ವಿರುದ್ಧ ಗುಜರಾತ್ ಕಾಂಗ್ರೆಸ್ (Gujarat Congress) ಅಸಮಾಧಾನ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಗುಜರಾತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಚಾವ್ಡಾ ( Amit Chavda) ಗುಜರಾತ್ನಲ್ಲಿ 25 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ, ಪಾಲಿಕೆಗಳಲ್ಲೂ ಬಿಜೆಪಿ ಅಧಿಕಾರದಲ್ಲಿದೆ, ಬಿಜೆಪಿ ಸರ್ಕಾರ ನಿರುದ್ಯೋಗ ಹೆಚ್ಚಾಗಲು ಕಾರಣವಾಗಿದೆ. ಉದ್ಯೋಗ ನೀಡುವ ಬದಲು ದೊಡ್ಡ ಜಾಹೀರಾತುಗಳನ್ನು ನೀಡುತ್ತಿದೆ. ಯುವಕರು ಕೆಲಸವಿಲ್ಲದೇ ಜೀವನೋಪಾಯಕ್ಕಾಗಿ ತಮ್ಮದೇ ಆದ ಗಾಡಿಗಳನ್ನು ಮತ್ತು ಅಂಗಡಿಗಳನ್ನು ರಸ್ತೆ ಬದಿ ನಡೆಸುತ್ತಿರುವುದಕ್ಕೂ ಸರ್ಕಾರ ಕಡಿವಾಣ ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಸರ್ಕಾರವನ್ನು ಗೂಂಡಾ ರಾಜ್ (Goonda Raj) ಎಂದಿರುವ ಅವರು ಬಿಜೆಪಿಯವರಿಗೆ ಸುಲಿಗೆ ಗೃಹ ಕೈಗಾರಿಕೆಯಂತಾಗಿದೆ. ಬೀದಿ ಬದಿಯ ಮಾರಾಟಗಾರರಿಂದ ಸುಲಿಗೆ ಮಾಡಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಇದು ಸ್ಪಷ್ಟವಾಗಿದೆ. ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅಮಿತ್ ಚಾವ್ಡಾ ಆರೋಪಿಸಿದ್ದಾರೆ.
ನವೆಂಬರ್ 9ರಂದು ರಾಜ್‌ಕೋಟ್ ಮೇಯರ್ ಡಾ.ಪ್ರದೀಪ್ ದಾವ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಆರೋಪದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ನಿರ್ಬಂಧಿಸಿದ್ದರು. ಇದಾದ ನಂತರ ವಡೋದರಾ, ಸೂರತ್, ಭಾವನಗರ ಮತ್ತು ಜುನಾಗಡ್ ಮುನ್ಸಿಪಲ್ ಕಾರ್ಪೊರೇಶನ್‌ಗಳೂ ಇದೇ ನಿಯಮ ಅಳವಡಿಸಿಕೊಂಡಿದ್ದವು. ಮುಂದಿನ ದಿನಗಳಲ್ಲಿ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿಯೂ ರಸ್ತೆ ಬದಿ ಮಾಂಸಾಹಾರ ಮಾರಾಟ ನಿಷೇಧವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:Gadchiroli encounter.. ಮಹಾರಾಷ್ಟ್ರದಲ್ಲಿ 26 ನಕ್ಸಲರ ಬೇಟೆಯಾಡಿದ ಪೊಲೀಸರು