ಪೋರಬಂದರ್/ ಸೂರತ್: ಗುಜರಾತ್ ಎಟಿಎಸ್ ತಂಡವು ಭಯೋತ್ಪಾದಕ ಘಟಕವೊಂದನ್ನು ಭೇದಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಟಿಎಸ್ ಐಜಿ ದೀಪನ್ ಸೇರಿದಂತೆ ಉನ್ನತ ಅಧಿಕಾರಿಗಳ ಬೆಂಗಾವಲು ತಂಡ ಪೋರಬಂದರ್ ತಲುಪಿದ್ದು, ಗುರುವಾರ ಬೆಳಗ್ಗೆಯಿಂದಲೇ ಹೆಚ್ಚಿನ ತನಿಖೆ ಆರಂಭಿಸಲಾಗಿದೆ. ಮಾಹಿತಿ ಪ್ರಕಾರ, ಬಂಧಿತ ವ್ಯಕ್ತಿಗಳು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
IS ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಮಹಿಳೆಯನ್ನು ಎಟಿಎಸ್ ಪೊಲೀಸರ ಸಹಾಯದಿಂದ ಸೂರತ್‌ನಲ್ಲಿ ಬಂಧಿಸಲಾಗಿದೆ. ಲಾಲ್ಗೇಟ್ ಪ್ರದೇಶದ ಸುಮೇರಾ ಬಂಧಿತ ಮಹಿಳೆ, ಈಕೆಯನ್ನು ಹೆಚ್ಚಿನ ವಿಚಾರಣೆಗಾಗಿ ಪೋರಬಂದರ್‌ಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ :ಜಮ್ಮು ಕಾಶ್ಮೀರದಲ್ಲಿ ತಪ್ಪಿದ ಭಾರಿ ದುರಂತ: ಭಯೋತ್ಪಾದಕರ ಸಹಚರ ಅರೆಸ್ಟ್, ಐದಾರು ಕೆಜಿ ಐಇಡಿ ಸ್ಫೋಟಕ ವಶಕ್ಕೆ
ನಿನ್ನೆ ಬೆಳಗ್ಗೆ 9 ಗಂಟೆಗೆ ಸುಮೇರಾ ಮನೆ ಮೇಲೆ ದಾಳಿ ಮಾಡಿದ ಎಟಿಎಸ್ ತಂಡ, ಆರು ಗಂಟೆಗಳ ಕಾಲ ನಿರಂತರವಾಗಿ ವಿಚಾರಣೆ ನಡೆಯಿತು. ಬಳಿಕ ಮಧ್ಯಾಹ್ನ 3 ಗಂಟೆಗೆ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಈ ಸಂಬಂಧ ಎಟಿಎಸ್ ಮತ್ತು ಸೂರತ್ ಕ್ರೈಂ ಬ್ರಾಂಚ್ ಶೋಧ ಮುಂದುವರೆಸುತ್ತಿದೆ. ಮಹಿಳೆಯು ಎರಡೂವರೆ ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದು, ಸದ್ಯಕ್ಕೆ ತನ್ನ ಕುಟುಂಬದೊಂದಿಗೆ ಸೂರತ್‌ನಲ್ಲಿ ನೆಲೆಸಿದ್ದಾರೆ. ದಕ್ಷಿಣ ಭಾರತದಲ್ಲಿ ವಿವಾಹವಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಹಿಳೆಯ ಕುಟುಂಬ ಸದಸ್ಯನೊಬ್ಬ ಸರ್ಕಾರಿ ನೌಕರ ಎಂಬ ಮಾಹಿತಿ ಬೆಳಕಿಗೆ ಬಂದಿದೆ.