ಕರ್ನಾಟಕ

karnataka

ETV Bharat / bharat

ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ: ₹1000 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ - ಈಟಿವಿ ಭಾರತ ಕರ್ನಾಟಕ

ಅಕ್ರಮವಾಗಿ ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಗುಜರಾತ್ ಎಟಿಎಸ್ ದಾಳಿ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ.

Nector Chem chemical factory
Nector Chem chemical factory

By

Published : Aug 16, 2022, 8:15 PM IST

ವಡೋದರಾ(ಗುಜರಾತ್​):ಭರೂಚ್​​ ಜಿಲ್ಲೆಯ ಅಂಕಲೇಶ್ವರ ಪ್ರದೇಶದಲ್ಲಿದ್ದ ಅಕ್ರಮ ಡ್ರಗ್ಸ್ ಕಾರ್ಖಾನೆಯ ಮೇಲೆ ಎಟಿಎಸ್ ಪೊಲೀಸರು​​ ದಾಳಿ ನಡೆಸಿ 513 ಕೆಜಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಅಂದಾಜು 1,026 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.

ನಕಲಿ ಔಷಧಿ ತಯಾರಿಕಾ ಕಾರ್ಖಾನೆ ಮೇಲೆ ದಾಳಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ. ವಡೋದರಾ ಗ್ರಾಮಾಂತರ ಸಾವಲಿ ತಾಲೂಕಿನ ಮೋಕ್ಸಿ ಎಂಬಲ್ಲಿ ನೆಕ್ಟರ್ ಕೆಮ್​ ರಾಸಾಯನಿಕ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ರಾಸಾಯನಿಕಗಳ ಬದಲಿಗೆ ಜನರನ್ನು ನಾಶ ಮಾಡುವ ಡ್ರಗ್ಸ್​​​​ ತಯಾರು ಮಾಡಲಾಗ್ತಿತ್ತು.

ಇದನ್ನೂ ಓದಿ:ಪ್ರೀತಿಗೆ ಅಡ್ಡಿಪಡಿಸಿದ ತಂದೆಯ ಮೇಲೆ ಸುಳ್ಳು ರೇಪ್‌ ಕೇಸ್‌ ಹಾಕಿ ಜೈಲಿಗಟ್ಟಿದ ಪುತ್ರಿ

ಅಕ್ರಮ ಕಾರ್ಖಾನೆಯಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಡ್ರಗ್ಸ್​ ತಯಾರಿಕೆಗೆ ಕಚ್ಚಾವಸ್ತು ಎಲ್ಲಿಂದ ಬರುತ್ತಿತ್ತು? ಡ್ರಗ್ಸ್‌ ಎಲ್ಲಿಗೆ ರವಾನೆಯಾಗ್ತಿತ್ತು? ಎಂಬುದರ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details