ಗಾಂಧಿನಗರ (ಗುಜರಾತ್):ಗುಜರಾತ್ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯವು ಜಂಟಿ ಕಾರ್ಯಾಚರಣೆ ನಡೆಸಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಬಂದರಿನಲ್ಲಿ 40 ಕೆಜಿ ಹೆರಾಯಿನ್ ಜಪ್ತಿ ಮಾಡಿದೆ.
ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸರಿಂದ 200 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ - heroin seized in kolkata port
ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸ್ ಅಧಿಕಾರಿಗಳ ತಂಡ 40 ಕೆಜಿ ಹೆರಾಯಿನ್ ಜಪ್ತಿ ಮಾಡಿದೆ.
![ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸರಿಂದ 200 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ gujarat-ats-and-dri-seize-40-kg-heroin-from-kolkata-port](https://etvbharatimages.akamaized.net/etvbharat/prod-images/768-512-16326852-thumbnail-3x2-ran.jpg)
ಕೋಲ್ಕತ್ತಾದ ಬಂದರಿನಲ್ಲಿ ಗುಜರಾತ್ ಪೊಲೀಸರಿಂದ 200 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ
ಜಪ್ತಿ ಮಾಡಲಾದ ಈ 40 ಕೆಜಿ ಹೆರಾಯಿನ್ ಮಾರುಕಟ್ಟೆ ಮೌಲ್ಯವು ಅಂದಾಜು 200 ಕೋಟಿ ರೂ.ಗಳಾಗಿದೆ. ಸ್ಕ್ರ್ಯಾಪ್ ಕಂಟೈನರ್‌ನಲ್ಲಿ ಹೆರಾಯಿನ್ ಕೋಲ್ಕತ್ತಾದ ಬಂದರಿಗೆ ತರಲಾಗಿತ್ತು ಎನ್ನಲಾಗಿದೆ. ಅಲ್ಲದೇ, ಈ ಕಂಟೈನರ್ ಫೆಬ್ರವರಿಯಲ್ಲಿ ದುಬೈನಿಂದ ಬಂದಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಓಣಂ ಹಬ್ಬದ ನಿಮಿತ್ತ ಒಂದೇ ವಾರದಲ್ಲಿ 625 ಕೋಟಿ ರೂಗಳ ಮದ್ಯ ಮಾರಾಟ! ಇದು ದಾಖಲೆ