ನವದೆಹಲಿ:ಕಾಂಗ್ರೆಸ್ ಪಕ್ಷವು ಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ 46 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿತು. ಹಿಂದಿನ ಶುಕ್ರವಾರ 43 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು.
ಪ್ರಮುಖ ಅಭ್ಯರ್ಥಿಗಳಿವರು.. :2ನೇ ಪಟ್ಟಿಯಲ್ಲಿ ಭುಜ್ ಕ್ಷೇತ್ರದಿಂದ ಅರ್ಜುನ್ ಬಾಯ್ ಭುಡಿಯಾ, ಜುನಾಗಢ-ಭಿಖಾಭಾಯಿ ಜೋಶಿ, ಸೂರತ್ ಪೂರ್ವ ಕ್ಷೇತ್ರ- ಅಸ್ಲಾಮ್ ಸೈಕಲ್ ವಾಲಾ, ಸೂರತ್ ಉತ್ತರ-ಅಶೋಕ ಬಾಯ್ ಪಟೇಲ್, ವಲ್ಸಾದ್ ಕ್ಷೇತ್ರ- ಕಮಲಕುಮಾರ್ ಪಟೇಲ್ ಪ್ರಮುಖ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್:ಮೂವರು ಮಹಿಳಾ ಅಭ್ಯರ್ಥಿಗಳಾದ ಲಿಂಬ್ಡಿಯಿಂದ ಕಲ್ಪನಾ ಕರಮ್ಸಿಭಾಯಿ ಮಕ್ವಾನಾ, ದೇಡಿಯಾಪಾಡಾ-(ಎಸ್‌ಟಿ) ಜೆರ್ಮಾಬೆನ್ ಸುಖಲಾಲ್ ವಾಸವಾ ಮತ್ತು ಕರಂಜ್- ಭಾರತಿ ಪ್ರಕಾಶ್ ಪಟೇಲ್ ಅವರಿಗೆ ಕೈ ಪಕ್ಷ ಟಿಕೆಟ್ ಕೊಟ್ಟಿದೆ.