ಕರ್ನಾಟಕ

karnataka

ETV Bharat / bharat

ಗುಜರಾತ್​ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಶೀಘ್ರ? - ಬಿಜೆಪಿ ಬಹುಮತದ ಸರ್ಕಾರ

ಮುಂದಿನ ಬಾರಿಯೂ ಗುಜರಾತಿನಲ್ಲಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಶಾ ಹೇಳಿರುವುದನ್ನು ನೋಡಿದರೆ, ಮತ್ತೆ ಭೂಪೇಂದ್ರ ಪಟೇಲ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.

ಗುಜರಾತ್​ ವಿಧಾನಸಭಾ ಚುನಾವಣಾ ದಿನಾಂಕ
AMIT SHAH GIVES SIGNS ABOUT GUJARAT ASSEMBLY ELECTIONS

By

Published : Sep 13, 2022, 3:19 PM IST

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಿಎಂ ಆಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದರು. ಈ ತಿಂಗಳ ಅಂತ್ಯದ ವೇಳೆಗೆ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸೂಚನೆಗಳು ಅವರ ಮಾತುಗಳಿಂದ ಕಂಡು ಬಂದಿವೆ.

ಭೂಪೇಂದ್ರ ಪಟೇಲ್ ಅವರು ಸೆಪ್ಟೆಂಬರ್ 13 ರಂದು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಗಾಗಿ ಬದ್ಧತೆ ಎಂಬ ಘೋಷವಾಕ್ಯದಡಿ ರಾಜ್ಯ ಸರ್ಕಾರದ ವತಿಯಿಂದ ಮಹಾತ್ಮ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಟೆಲಿ ಕಾನ್ಫರೆನ್ಸಿಂಗ್ ಮೂಲಕ ಅಮಿತ್ ಶಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮುಂದಿನ ಬಾರಿಯೂ ಗುಜರಾತಿನಲ್ಲಿ ಭೂಪೇಂದ್ರ ಪಟೇಲ್ ನೇತೃತ್ವದಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ ಎಂದು ಶಾ ಹೇಳಿರುವುದನ್ನು ನೋಡಿದರೆ, ಮತ್ತೆ ಭೂಪೇಂದ್ರ ಪಟೇಲ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಅಲ್ಲದೇ ಗುಜರಾತ್​ನಲ್ಲಿ ಬೇಗನೆ ಚುನಾವಣೆ ನಡೆಯಬಹುದು ಎಂಬ ಸಂದೇಶವೂ ಈ ಮಾತುಗಳಿಂದ ಕಂಡು ಬರುತ್ತಿದೆ.

ಅಕ್ಟೋಬರ್ 10 ರಿಂದ 12 ರ ಮಧ್ಯೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಆದರೆ ಒಂದೊಮ್ಮೆ ಅಷ್ಟರೊಳಗೆ ಚುನಾವಣೆ ಘೋಷಣೆಯಾದಲ್ಲಿ ಮತದಾರರ ಪಟ್ಟಿಯನ್ನು ಬೇಗನೆ ತಯಾರಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ:ಗೋಧ್ರಾ ಹಿಂಸಾಚಾರ: ಬಾಕಿ ಉಳಿದ ಎಲ್ಲ ಪ್ರಕರಣಗಳ ವಿಚಾರಣೆ ರದ್ದುಗೊಳಿಸಿದ ​ಸುಪ್ರೀಂ ಕೋರ್ಟ್

ABOUT THE AUTHOR

...view details