ಅಹಮದಾಬಾದ್, ಗುಜರಾತ್: ಎಲ್ಲಾ ಶಿಕ್ಷಣ ಸಂಸ್ಥೆಗಳು, ಕೊರೊನಾ ಸಾಂಕ್ರಾಮಿಕದ ಕಾರಣದಿಂದ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಮೊಟಕುಗೊಳಿಸಿವೆ. ಆದರೆ ಕೆಲವೊಂದು ಶೈಕ್ಷಣಿಕ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಚಿಂತಿಸುತ್ತವೆ. ಅಂತಹ ಶೈಕ್ಷಣಿಕ ಸಂಸ್ಥೆಯ ಪಟ್ಟಿಗೆ ಸೇರುತ್ತದೆ.
ಹೌದು, ಅಹಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಎಲ್ಲಾ ವರ್ಷಗಳಂತೆ ಈ ವರ್ಷವೂ ಕೂಡಾ ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ದು, ಕೊರೊನಾ ವೇಳೆಯಲ್ಲಿ ಸುಮಾರು 450ಕ್ಕೂ ಹೆಚ್ಚು ಮಂದಿಗೆ ಕೆಲಸ ಹುಡುಕಿಕೊಳ್ಳಲು ಸಹಕರಿಸಿದೆ.
ಕೋವಿಡ್ ಇದ್ದ ಕಾರಣದಿಂದ ಆನ್ಲೈನ್ ಮೂಲಕ ಕ್ಯಾಂಪಸ್ ಸೆಲೆಕ್ಷನ್ನ ಸಂದರ್ಶನಗಳು ನಡೆದಿದ್ದು, ಕೊರೊನಾ ವೇಳೆಯಲ್ಲಿ ಐದಕ್ಕೂ ಹೆಚ್ಚು ಆನ್ಲೈನ್ ಸಂದರ್ಶನಗಳನ್ನು ಏರ್ಪಡಿಸಿ, ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ.