ಕರ್ನಾಟಕ

karnataka

ETV Bharat / bharat

ಗುಜರಾತ್ ಸಮುದ್ರದಿಂದ ಇಬ್ಬರು ಮೀನುಗಾರರನ್ನು ಅಪಹರಿಸಿದ ಪಾಕ್ - ಇಬ್ಬರು ಮೀನುಗಾರರನ್ನು ಅಪಹರಿಸಿದ ಪಾಕ್

ಮಾಹಿತಿ ಪ್ರಕಾರ, ಪಾಕಿಸ್ತಾನದ ಆಪರೇಷನ್ ಮುಸ್ತಾದ್ ವೇಳೆ ಈ ಬೋಟ್ ಸಿಕ್ಕಿ ಬಿದ್ದಿದೆ. ಈ ದೋಣಿಯಲ್ಲಿ ಇಬ್ಬರು ಮೀನುಗಾರರಿದ್ದು, ವಿಚಾರಣೆಗಾಗಿ ಕರಾಚಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ..

Another nefarious act of Pakistan
ಗುಜರಾತ್ ಸಮುದ್ರದಿಂದ ಇಬ್ಬರು ಮೀನುಗಾರರನ್ನು ಅಪಹರಿಸಿದ ಪಾಕ್

By

Published : Feb 2, 2022, 11:33 AM IST

ದೇವಭೂಮಿ-ದ್ವಾರಕಾ(ಗುಜರಾತ್​) :ಮೀನುಗಾರಿಕಾ ದೋಣಿಯನ್ನು ಪಾಕಿಸ್ತಾನ ಮಂಗಳವಾರ ಅಪಹರಿಸಿದೆ. 'ಸತ್ಯಾವತಿ' ಎಂಬ ಹೆಸರಿನ ಬೋಟ್ ಗುಜರಾತ್ ಸಮುದ್ರದಿಂದ ಮೀನುಗಾರಿಕೆಗೆ ತೆರಳಿತ್ತು. ಇಂಜಿನ್ ವೈಫಲ್ಯದಿಂದ ಬೋಟ್ ಸಮುದ್ರದಲ್ಲಿ ಸಿಲುಕಿತ್ತು.

ಇಬ್ಬರು ಮೀನುಗಾರರನ್ನು ಅಪಹರಿಸಿದ ಪಾಕ್

ಮಾಹಿತಿ ಪ್ರಕಾರ, ಪಾಕಿಸ್ತಾನದ ಆಪರೇಷನ್ ಮುಸ್ತಾದ್ ವೇಳೆ ಈ ಬೋಟ್ ಸಿಕ್ಕಿ ಬಿದ್ದಿದೆ. ಈ ದೋಣಿಯಲ್ಲಿ ಇಬ್ಬರು ಮೀನುಗಾರರಿದ್ದು, ವಿಚಾರಣೆಗಾಗಿ ಕರಾಚಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇತ್ತೀಚೆಗೆ ಎರಡು ಭಾರತೀಯ ದೋಣಿಗಳನ್ನು ಪಾಕಿಸ್ತಾನ ಅಪಹರಿಸಿತ್ತು. ಪೋರಬಂದರ್ ಬಳಿ ಭಾರತೀಯ ಜಲಪ್ರದೇಶದಿಂದ ಪಾಕಿಸ್ತಾನದ ಕಡಲ ಭದ್ರತಾ ಪಡೆ ಭಾರತೀಯ ದೋಣಿ ಮತ್ತು ಮೂವರು ಮೀನುಗಾರರನ್ನು ಅಪಹರಿಸಿದೆ. ಅದಕ್ಕೂ ಮೊದಲು ಓಖಾ ಕರಾವಳಿಯಲ್ಲಿ ತುಳಸಿ ಮೈಯಾ ಎಂಬ ದೋಣಿಯಿಂದ 7 ಮೀನುಗಾರರನ್ನು ಅಪಹರಿಸಲಾಗಿತ್ತು.

ಇದನ್ನೂ ಓದಿ:ಓಖಾ ಸಮುದ್ರದಿಂದ 7 ಮೀನುಗಾರರನ್ನು ಅಪಹರಿಸಿದ ಪಾಕ್

ABOUT THE AUTHOR

...view details