ಕರ್ನಾಟಕ

karnataka

ETV Bharat / bharat

2027ಕ್ಕೆ ಗುಜರಾತ್​- ಅಹಮದಾಬಾದ್​ ಹೈಸ್ಪೀಡ್ ಬುಲೆಟ್​​ ರೈಲು ಜನ ಸೇವೆಗೆ - ಗುಜರಾತ್​- ಅಹಮದಾಬಾದ್​ ಹೈಸ್ಪೀಡ್​ ರೈಲು ಯೋಜನೆ

ಮುಂಬೈ- ಅಹಮದಾಬಾದ್​ ಹೈಸ್ಪೀಡ್​ ರೈಲು ಯೋಜನೆಯನ್ನು 2026ರ ವೇಳೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಿ, 2027 ರಲ್ಲಿ ಜನರ ಸೇವೆಗೆ ಸಿದ್ಧಪಡಿಸಲಾಗುವುದು ಎಂದು ಯೋಜನೆಯ ಜವಾಬ್ದಾರಿ ಹೊತ್ತಿರುವ ಎನ್​ಎಚ್​ಎಸ್ಆ​ರ್​ಸಿಎಲ್​ ತಿಳಿಸಿದೆ.

bullet-train
ಹೈಸ್ಪೀಡ್ ಬುಲೆಟ್​​ ರೈಲು

By

Published : Apr 12, 2022, 9:58 PM IST

ಸೂರತ್ (ಗುಜರಾತ್):ಬಹುನಿರೀಕ್ಷಿತ ಮುಂಬೈ-ಅಹಮದಾಬಾದ್ ಹೈಸ್ಪೀಡ್ ಬುಲೆಟ್​ ರೈಲು 2026 ರ ವೇಳೆಗೆ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧವಾಗಲಿದೆ. ಇದು ಗುಜರಾತ್​ ವಿಭಾಗದಲ್ಲಿ ಸಂಚಾರ ನಡೆಸಲಿದ್ದು, 2027 ರ ವೇಳೆಗೆ ಸಂಪೂರ್ಣವಾಗಿ ಜನ ಸೇವೆಗೆ ಸಿಗಲಿದೆ ಎಂದು ಹೈಸ್ಪೀಡ್​ ರೈಲ್​ ಕಾರ್ಪೋರೇಷನ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಎಸ್​ಸಿ ಅಗ್ನಿಹೋತ್ರಿ ತಿಳಿಸಿದ್ದಾರೆ.

ಯೋಜನೆಯ ಹೆಚ್ಚಿದ ವೆಚ್ಚಗಳು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ನಿಗದಿತ ಗಡುವಿಗೆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಹಭಾಗಿತ್ವ ಹೊಂದಿರುವ ಜಪಾನ್ ಸರ್ಕಾರದೊಂದಿಗೆ ಚರ್ಚಿಸಿ ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಲು ಯತ್ನಿಸಲಾಗುವುದು ಎಂದು ಜಪಾನ್​ ರಾಯಭಾರಿ ಸತೋಶಿ ಸುಜುಕಿ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗುಜರಾತ್, ದಾದ್ರಾ ಮತ್ತು ನಗರ ಹವೇಲಿಯಲ್ಲಿ ಸಂಪೂರ್ಣ ಮಾರ್ಗದ ನಿರ್ಮಾಣಕ್ಕಾಗಿ (352 ಕಿಮೀ ದೂರ) 100 ಪ್ರತಿಶತದಷ್ಟು ಗುತ್ತಿಗೆಗಳನ್ನು ಭಾರತೀಯರಿಗೆ ನೀಡಲಾಗಿದೆ. ಗುಜರಾತ್‌ನಲ್ಲಿ 8 ನಿಲ್ದಾಣಗಳಿದ್ದು, ಸೂರತ್ ನಿಲ್ದಾಣವು ಹೈ-ಸ್ಪೀಡ್ ಬುಲೆಟ್ ರೈಲು ಯೋಜನೆಯಲ್ಲಿಯೇ ವಿಶೇಷವಾಗಿ, ವಿಸ್ತೀರ್ಣದಲ್ಲಿ ದೊಡ್ಡದಾಗಿರಲಿದೆ. 2023 ರ ವೇಳೆಗೆ ಸೂರತ್ ನಿಲ್ದಾಣವು ಪೂರ್ಣಗೊಳ್ಳಲಿದೆ ಮತ್ತು ಯೋಜನೆಯ ಭಾಗವಾಗಿ ಸಿದ್ಧವಾಗುವ ಮೊದಲ ನಿಲ್ದಾಣವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!

For All Latest Updates

TAGGED:

ABOUT THE AUTHOR

...view details