ಅಹಮದಾಬಾದ್, ಗುಜರಾತ್:ಕಪ್ಪು ಶಿಲೀಂಧ್ರ ರೋಗದ ನಂತರ ಗುಜರಾತ್ಗೆ ಬಿಳಿ ಶಿಲೀಂಧ್ರ ರೋಗ ಕಾಲಿಟ್ಟಿದೆ. ಅಹಮದಾಬಾದ್ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ಮೂರು ವೈಟ್ ಫಂಗಸ್ ಕೇಸ್ಗಳು ಪತ್ತೆಯಾಗಿವೆ.
ಪ್ರಮುಖವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹಾಗೂ ಮಧುಮೇಹಿಗಳಲ್ಲಿ ಈ ಸೋಂಕು ಹೆಚ್ಚಾಗಿ ಕಂಡು ಬರಲಿದ್ದು, ಶ್ವಾಸಕೋಶದ ಜೊತೆಗೆ ದೇಹದ ಇತರ ಭಾಗಗಳಾದ ಕಿಡ್ನಿ, ಉಗುರು ಹಾಗೂ ಚರ್ಮಕ್ಕೂ ಹಾನಿ ಮಾಡುತ್ತದೆ.
ಇದನ್ನೂ ಓದಿ:ಜನರ ನಿಲ್ಲದ ಕಣ್ಣೀರು ಪ್ರಧಾನಿ ಕಣ್ಣೀರಿಗಿಂತ ಮುಖ್ಯವಾಗಿದೆ: ಕಾಂಗ್ರೆಸ್
ಕೋವಿಡ್ ಸೋಂಕಿನಿಂದ ಗುಣಮುಖರಾಗುವ ಕೆಲ ಜನರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿರುತ್ತವೆ ಎನ್ನಲಾಗಿದೆ. ವೈಟ್ ಫಂಗಸ್ಗೆ ಆ್ಯಂಟಿ ಫಂಗಲ್ ಇಂಜೆಕ್ಷನ್ ನೀಡಲಾಗ್ತಿದ್ದು, ಇದರ ಪ್ರತಿ ಡೋಸ್ನ ಬೆಲೆ 3,500 ರೂ. ಆಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ PMCH ಮೈಕ್ರೋಬಯಾಲಜಿ ಮುಖ್ಯಸ್ಥ ಡಾ. ಎಸ್ ಎನ್ ಸಿಂಗ್, ಬಿಹಾರದಲ್ಲಿ ನಾಲ್ವರು ಸೋಂಕಿತರ ಮಾದರಿ ಈಗಾಗಲೇ ತೆಗೆದುಕೊಳ್ಳಲಾಗಿದ್ದು, ಇದರಿಂದ ಅವರ ಶ್ವಾಸಕೋಸಕ್ಕೆ ಹೆಚ್ಚಿನ ತೊಂದರೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.