ಸೂರತ್(ಗುಜರಾತ್):ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಮದುವೆ ಮಾಡಿಸಿಕೊಡುವ ಗುಜರಾತ್ನ ಪಿಪಿ ಸವಾನಿ ಗ್ರೂಪ್ ಈ ವರ್ಷವೂ 300 ಯುವತಿಯರಿಗೆ 'ತಾಳಿ ಭಾಗ್ಯ' ನೀಡಿದೆ.
ಗುಜರಾತ್ನ ಸೂರತ್ ಜಿಲ್ಲೆಯ ಸವಾನಿ ಗ್ರೂಪ್ 2008ರಿಂದ ಬಡ ಮತ್ತು ತಂದೆಯನ್ನು ಕಳೆದುಕೊಂಡ ಹೆಣ್ಣು ಮಕ್ಕಳ ವಿವಾಹವನ್ನು ನೆರವೇರಿಸುತ್ತಾ ಬರುತ್ತಿದೆ.
ಈ ವರ್ಷವೂ ಕೂಡ 300 ಜೋಡಿಗೆ ಸಾಮೂಹಿಕ ವಿವಾಹ ಮಾಡಿಸಿದೆ. ಈ ಮೂಲಕ ಸವಾನಿ ಗ್ರೂಪ್ನ ಅಧ್ಯಕ್ಷ ಮಹೇಶ್ ಸವಾನಿ 4 ಸಾವಿರ ಬಡ ಹೆಣ್ಣು ಮಕ್ಕಳಿಗೆ 'ತಂದೆ'ಯ ಸ್ಥಾನವನ್ನು ತುಂಬಿದ್ದಾರೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಸವಾನಿ ಗ್ರೂಪ್ನ ಅಧ್ಯಕ್ಷ ಮಹೇಶ್ ಸವಾನಿ, ಕಂಪನಿಯಿಂದ ಪ್ರತಿವರ್ಷವೂ ಬಡ ಮತ್ತು ತಂದೆಯನ್ನು ಕಳೆದುಕೊಂಡ ಅನಾಥ ಹೆಣ್ಣು ಮಕ್ಕಳಿಗೆ ವಿವಾಹವನ್ನು ಮಾಡಿಸಲಾಗುತ್ತಿದೆ.