ದಾಹೋದ್, ಗುಜರಾತ್:ಸುಮಾರು 50 ವರ್ಷದ ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯೋರ್ವಳನ್ನು ಆಕೆಯ ಸಂಬಂಧಿಯೋರ್ವ ಬೀದಿಯಲ್ಲೇ ಥಳಿಸಿರುವ ಘಟನೆ ಗುಜರಾತ್ನ ದಾಹೋದ್ ಜಿಲ್ಲೆಯಲ್ಲಿ ನಡೆದಿದೆ.
ಬೇರೊಂದು ಕುಟುಂಬದೊಂದಿಗೆ ಸಂಬಂಧ ಕಡಿದುಕೊಳ್ಳದ ಕಾರಣಕ್ಕೆ ವ್ಯಕ್ತಿ ಮಹಿಳೆಯನ್ನು ಥಳಿಸಿದ್ದಾನೆ ಎನ್ನಲಾಗಿದ್ದು, ಮನೆಯ ಹೊರಗೆ, ರಸ್ತೆಯ ಪಕ್ಕದಲ್ಲೇ ಬಡಿಗೆಯಿಂದ ಥಳಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ಆತ ಥಳಿಸುವ ವೇಳೆ ಸಾಕಷ್ಟು ಮಂದಿ ಸ್ಥಳದಲ್ಲಿ ಮೂಕಪ್ರೇಕ್ಷಕರಾಗಿರುವುದು ಕಂಡುಬಂದಿದೆ. ನಂತರ ಆ ವ್ಯಕ್ತಿಯನ್ನು ದನದ ಕೊಟ್ಟಿಗೆ ಬಳಿ ತಂದು ಬಿಡುವ ದೃಶ್ಯವೂ ಕೂಡಾ ವಿಡಿಯೋದಲ್ಲಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಕ್ರಮ ಕೈಗೊಂಡ ಪೊಲೀಸರು ಸಂತ್ರಸ್ತೆ ಸಂಬಂಧಿಗಳಾದ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಚಿಂದಿ ಆಯುವ ಮಹಿಳೆಯ ಇಂಗ್ಲಿಷ್ ಕೌಶಲ್ಯ: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸೃಷ್ಟಿಸಿದ ವಿಡಿಯೋ