ಭಾವನಗರ (ಗುಜರಾತ್) : ಗುಜರಾತ್‌ನ ಭಾವನಗರ ಜಿಲ್ಲೆಯ ಮಲನ್ ನದಿಯಲ್ಲಿ ಈಜಲು ತೆರಳಿದ್ದ ಮೂವರು ಸಹೋದರರು ಹಾಗು ಮತ್ತೋರ್ವ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ ಎಂದು ಮಹುವ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೃತಪಟ್ಟ ನಾಲ್ವರು ಯುವಕರು ಮಹುವ ತಾಲೂಕಿನ ಲಖುಪಾರ ಗ್ರಾಮದರಾಗಿದ್ದು, 17 ರಿಂದ 27 ವರ್ಷ ವಯಸ್ಸಿನವರು. ವಿಷಯ ತಿಳಿಯುತ್ತಿದ್ದಂತೆ ಶನಿವಾರ ಸಂಜೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇಂದು ಬೆಳಗ್ಗೆ ಮತ್ತೊಂದು ಶವ ಪತ್ತೆಯಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಂದೇ ಕುಟುಂಬದ ಯುವಕರು ಸಾವು: ಮಲನ್ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ನಾಲ್ವರು ಯುವಕರ ಪೈಕಿ ಮೂವರು ಸೋದರರು. ಇನ್ನೊಬ್ಬ ಯುವಕನೂ ಸಹ ಅದೇ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಈಜಲು ಹೋಗಿ ನೀರಿನಲ್ಲಿ ಮುಳುಗಿದವರನ್ನು 28 ವರ್ಷದ ಹಾರ್ದಿಕ್‌ಭಾಯ್ ದೇವಚಂದಭಾಯಿ ಮಾರು, 22 ವರ್ಷದ ಮಾರು ಕಿಶೋರ್‌ಭಾಯ್ ದೇವಚಂದಭಾಯ್, 25 ವರ್ಷದ ಭವೇಶ್ ದೇವಚಂದಭಾಯ್ ಮಾರು ಮತ್ತು 18 ವರ್ಷದ ಮಹೇಂದ್ರಭಾಯಿ ದಾಮ್‌ಜಿಭಾಯಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ :ಎರಡು ಪ್ರತ್ಯೇಕ ಪ್ರಕರಣ : ಒಟ್ಟು ಹತ್ತು ಮಂದಿ ನೀರಿನಲ್ಲಿ ಮುಳುಗಿ ನಾಪತ್ತೆ, ಮುಂದುವರಿದ ಶೋಧ