ಗಾಂಧಿನಗರ:ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಒಟ್ಟು 19 ಪ್ರದೇಶಗಳಲ್ಲಿ ಇಂದು ಲಘು ಭೂಕಂಪ ಸಂಭವಿಸಿದೆ. ತಡರಾತ್ರಿಯಿಂದ ಇಂದು ಬೆಳಗಿನ ಜಾವದ ವರೆಗೆ ರಿಕ್ಟರ್ ಮಾಪಕದಲ್ಲಿ 1.7 ರಿಂದ 3.3 ತೀವ್ರತೆಯ ಭೂಕಂಪನ ದಾಖಲಾಗಿದೆ.
ಎರಡು-ಮೂರು ತಿಂಗಳ ಭಾರಿ ಮಳೆಯ ನಂತರ ಗುಜರಾತ್‌ನ ಸೌರಾಷ್ಟ್ರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆಯ (ಐಎಸ್‌ಆರ್) ನಿರ್ದೇಶಕ ಸುಮರ್ ಚೋಪ್ರಾ ಹೇಳಿದ್ದು, ಇದನ್ನು 'ಮಾನ್ಸೂನ್-ಪ್ರೇರಿತ ಭೂಕಂಪನ' ಎಂದು ಕರೆದಿದ್ದಾರೆ.