ಸೂರತ್(ಗುಜರಾತ್): ಗುಜರಾತ್ನಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ 13 ಅಂಗಾಂಗಳನ್ನು ದಾನ ಮಾಡಲಾಗಿದೆ. 4 ಕಿಡ್ನಿ, 2 ಲಿವರ್, 1 ಹಾರ್ಟ್, 2 ಶ್ವಾಸಕೋಶಗಳು ಮತ್ತು ನಾಲ್ಕು ಕಣ್ಣುಗಳನ್ನು ಎನ್ಜಿಒವೊಂದರ ಮೂಲಕ ದಾನ ಮಾಡಲಾಗಿದೆ.
ಅಪಘಾತದಲ್ಲಿ ಮಿತ್ ಕಲ್ಪೇಶಭಾಯಿ ಪಾಂಡ್ಯ (18) ಮತ್ತು ಕ್ರಿಶ್ ಸಂಜಯ್ ಭಾಯ್ ಗಾಂಧಿ (18) ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಈ ಮಾಹಿತಿಯನ್ನು ಕುಟುಂಬಸ್ಥರಿಗೆ ತಿಳಿಸಿದ ಬಳಿಕ ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಯುವಕರ ಪೋಷಕರು ಈ ನಿರ್ಧಾರ ತೆಗೆದುಕೊಂಡ ಹಿನ್ನೆಲೆ ಪೊಲೀಸರು ಅಂಗಾಂಗಳನ್ನು ಸಾಗಿಸಲು ಗ್ರೀನ್ ಕಾರಿಡಾರ್ ನಿರ್ಮಿಸಿದ್ರು.
ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯಲ್ಲಿ ವ್ಯಕ್ತಿಗೆ ಶ್ವಾಸಕೋಶ ಕಸಿ ಮಾಡಲಾಗಿದೆ. ಅಹಮದಾಬಾದ್ನ ಸಿಮ್ಸ್ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡಲಾಗಿದೆ. ಅಹಮದಾಬಾದ್ನ ಶಾಲ್ಬಿ ಮತ್ತು ಸ್ಟರ್ಲಿಂಗ್ ಆಸ್ಪತ್ರೆಯಲ್ಲಿ ಲಿವರ್, ಇಲ್ಲಿನ ಐಕೆಡಿಆರ್ಸಿ ಆಸ್ಪತ್ರೆಯಲ್ಲಿ ನಾಲ್ಕು ಮೂತ್ರಪಿಂಡ ಕಸಿ ಮಾಡಲಾಗಿದೆ. ಲೋಕದೃಷ್ಟಿ ಚಕ್ಷು ಬ್ಯಾಂಕ್ಗೆ ನಾಲ್ಕು ಕಣ್ಣುಗಳನ್ನು ದಾನ ಮಾಡಲಾಯಿತು.
ಇದನ್ನೂ ಓದಿ: ಉಡುಪಿ: ಪ್ರೇಯಸಿಗೆ ಚಾಕು ಇರಿದು ತಾನೂ ಕತ್ತು ಕುಯ್ದುಕೊಂಡಿದ್ದ ಯುವಕ - ಇಬ್ಬರೂ ಸಾವು
ನಿನ್ನೆ ಕ್ರಿಶ್ ಗಾಂಧಿಯ 18 ನೇ ವರ್ಷದ ಹುಟ್ಟುಹಬ್ಬವಾಗಿದ್ದರಿಂದ ಬಾಲ್ಯದ ಗೆಳೆಯ ಪಾಂಡ್ಯ ಜತೆ ಪಾರ್ಟಿಗೆ ಹೋಗಿದ್ದನು. ಈ ವೇಳೆ ಯುವಕರು ಬರುತ್ತಿದ್ದ ಬೈಕ್ಗೆ ಕಾರೊಂದು ಗುದ್ದಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದರು. ಹಿಟ್ ಆ್ಯಂಡ್ ರನ್ ಮಾಡಿ ಓಡಿ ಹೋಗಿದ್ದ ಕಾರಿನ ಚಾಲಕ ರಿಜ್ವಾನ್ಅನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.