ಕರ್ನಾಟಕ

karnataka

ETV Bharat / bharat

ಓಡಿಹೋದ ಹೆಂಡತಿ: ಸತ್ವ ಪರೀಕ್ಷೆ ಎಂದು ಅತ್ತೆ-ಮಾವ ಸೇರಿ 6 ಮಂದಿಯ ಕೈ ಸುಟ್ಟ ಅಳಿಯ! - ಗುಜರಾತ್

ಹೆಂಡತಿ ಬೇರೆ ಹುಡುಗನ ಜೊತೆ ಓಡಿಹೋಗಿದ್ದಕ್ಕೆ ಕೋಪಗೊಂಡ ಪತಿ ಪತ್ನಿಯ ಪೋಷಕರಿಗೆ ಶಿಕ್ಷೆ ವಿಧಿಸಿದ್ದಾನೆ. ಅವರೆಲ್ಲರೂ ಈಗ ಕೈ ಸುಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Gujara: six family members are forced to dip hands in hot oil to prove innocence in kutch
ಓಡಿಹೋದ ಹೆಂಡತಿ: ಸತ್ವ ಪರೀಕ್ಷೆ ಎಂದು ಹೆಂಡಿತಿ ಪೋಷಕರ ಕೈ ಸುಟ್ಟ ಅಳಿಯ

By

Published : Aug 12, 2021, 3:54 PM IST

ಕಚ್​(ಗುಜರಾತ್): ತವರು ಮನೆಗೆ ಹೋದ ಹೆಂಡತಿ ಕಾಣೆಯಾಗಿದ್ದು, ಇದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಸಾಬೀತು ಮಾಡಲು ಪರಾರಿಯಾದ ಮಹಿಳೆಯ ಕುಟುಂಬದವರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಸತ್ವ ಪರೀಕ್ಷೆಗೆ ಒಳಗಾಗಿದ್ದಾರೆ.

ಘಟನೆ ಸಂಬಂಧ ಮಹಿಳೆಯ ಕುಟುಂಬದ ಆರು ಸದಸ್ಯರ ಕೈ ಸುಟ್ಟು ಹೋಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾಪರ್ ತಾಲೂಕಿನ ಗೆಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತರನ್ನು ಈ ಚಿತ್ರಹಿಂಸೆಗೆ ಒಳಪಡಿಸಿದ್ದಕ್ಕಾಗಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

ಪ್ರಕರಣದ ವಿವರ:

ಆರೋಪಿ ತನೋ ಧೇಲಾಳ ಪತ್ನಿ ಭಕ್ತವಾಡಿ ವಂದ್ ಹಳ್ಳಿಯಲ್ಲಿರುವ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಎರಡು ತಿಂಗಳ ಹಿಂದೆ ಈಕೆ ಬೇರೆ ಹುಡುಗನೊಂದಿಗೆ ಪರಾರಿಯಾಗಿದ್ದಳು. ಇದು ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿತ್ತು.

ಮಂಗಳವಾರ ಧೇಲಾ ಮತ್ತು ಆತನ ಸಂಬಂಧಿಕರು ರಾಜಿ ಮಾಡಿಕೊಳ್ಳುವ ನೆಪದಲ್ಲಿ ಹೀರಾ ಕೋಲಿಯ ಕುಟುಂಬಕ್ಕೆ ಕರೆ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳೋಣ ಎಂದು ಕರೆಸಿಕೊಂಡು ಕೋಲಿ ಮತ್ತು ಆತನ ಕುಟುಂಬ ಸದಸ್ಯರು ತನ್ನ ಹೆಂಡತಿ ಪರಾರಿಯಾಗಲು ಸಹಾಯ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಹೆಚ್ಚಿನ ಓದಿಗೆ: Pornography Case: ನಟಿ ಗೆಹಾನಾ ವಸಿಷ್ಠ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿದ ಕೋರ್ಟ್​

ಈ ವೇಳೆ ಕೋಲಿ ಕುಟುಂಬವು ಅದರಲ್ಲಿ ತಮ್ಮ ಪಾತ್ರ ಏನೂ ಇಲ್ಲ ಎಂದು ಹೆಳಿದರೂ ಕೇಳದ ಧೇಲಾ ಕುಟುಂಬ ನಿಮ್ಮ ಪಾತ್ರ ಏನೂ ಇಲ್ಲ ಎಂದಾದರೆ ಕುದಿಯುವ ಎಣ್ಣೆಯಲ್ಲಿ ಕೈಗಳನ್ನು ಅದ್ದಿ ಸತ್ಯ ಸಾಬೀತು ಮಾಡಿ ಎಂದು ಒತ್ತಡ ಹಾಕಿದೆ. ಈ ರೀತಿ ಚಿತ್ರಹಿಂಸೆ ನೀಡಲು ಈ ಕುಟುಂಬ ಪೂರ್ವ ಯೋಜನೆ ಮಾಡಿಕೊಂಡಿತ್ತಂತೆ. ಸಂತ್ರಸ್ತರು ಅವರ ಮನೆಗೆ ತಲುಪುವ ಮೊದಲೇ ಅವರು ಬಿಸಿ ಎಣ್ಣೆಯನ್ನು ಸಿದ್ಧವಾಗಿರಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕೋಲಿ ಕುಟುಂಬವು ಅಳಿಯನ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಗ್ರಾಮಸ್ಥರಿಂದ ಥಳಿಸಲ್ಪಡುವ ಭಯದಿಂದ ಈ ರೀತಿ ಮಾಡಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details