ನವ ದೆಹಲಿ:ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದೆ. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಉಭಯ ರಾಜ್ಯಗಳಲ್ಲಿ 850 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ದೇಶದ ಗಮನ ಸೆಳೆದಿದ್ದ ಗುಜರಾತ್‌ನಲ್ಲಿ 801.85 ಕೋಟಿ ಮತ್ತು ಹಿಮಾಚಲದಲ್ಲಿ 57.24 ಕೋಟಿ ರೂ.ಯಷ್ಟು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2017ರ ಚುನಾವಣೆಗೆ ಹೋಲಿಸಿದರೆ ಗುಜರಾತ್‌ನಲ್ಲಿ ಇದು ಎರಡು ಸಾವಿರ ಪಟ್ಟು (ಪ್ರತಿಶತ 2,846.89) ಅಧಿಕವಾಗಿದೆ. ಅದೇ ರೀತಿಯಾಗಿ ಹಿಮಾಚಲ ಪ್ರದೇಶದಲ್ಲೂ ಐನೂರು ಪಟ್ಟು (ಪ್ರತಿಶತ 533.88) ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. 2017ರಲ್ಲಿ ಗುಜರಾತ್ ಮತ್ತು ಹಿಮಾಚಲದಲ್ಲಿ ಕ್ರಮವಾಗಿ 27.21 ಕೋಟಿ ಮತ್ತು 9.03 ಕೋಟಿ ರೂ.ಯಷ್ಟು ಮಾತ್ರ ವಸ್ತುಗಳ ಪತ್ತೆಯಾಗಿದ್ದವು.