ಢಾಕಾ: ಪಾಕ್ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ 50 ನೇ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಿದ್ದರು.
ಬಾಂಗ್ಲಾದೇಶದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ಕೋವಿಂದ್ ಅವರು ಇಂದು ಢಾಕಾದ ರಾಷ್ಟ್ರೀಯ ಪರೇಡ್ ಮೈದಾನದಲ್ಲಿ ನಡೆದ ವಿಜಯ ದಿನದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರನ್ನು ರಾಷ್ಟ್ರಪತಿ ಹಮೀದ್ ಮತ್ತು ಪ್ರಧಾನಿ ಹಸೀನಾ ಸ್ವಾಗತಿಸಿದರು.
ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಿದೇಶಿ ಸೈನಿಕರು ವಿಜಯ ದಿನದ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಿಲಿಟರಿ ಬ್ಯಾಂಡ್ ಸೇರಿದಂತೆ 122 ಸದಸ್ಯರೊಂದಿಗೆ ಭಾರತೀಯ ಪಡೆ ಹಾಗೂ ಯುಎಸ್ ಮತ್ತು ಮೆಕ್ಸಿಕೋ ಮಿಲಿಟರಿ ಸೇನಾ ಪಡೆ ಪರೇಡ್ನಲ್ಲಿ ಭಾಗಿಯಾಗಿದ್ದವು. ಬಾಂಗ್ಲಾದೇಶದ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಇತರ ಅರೆಸೇನಾ ಘಟಕಗಳು ಹಾಗೂ ಮಿಲಿಟರಿಯೇತರ ಮತ್ತು ಉಪಯುಕ್ತ ಸೇವೆಗಳು ಮತ್ತು ಸಚಿವಾಲಯಗಳ 23 ತುಕಡಿಗಳು ಪರೇಡ್ನಲ್ಲಿ ಪಾಲ್ಗೊಂಡಿದ್ದವು. ರಾಷ್ಟ್ರೀಯ ಪರೇಡ್ ಸ್ಕ್ವೇರ್ನಲ್ಲಿ ನಡೆದ ಸಮಾರಂಭದಲ್ಲಿ ಸಶಸ್ತ್ರ ಪಡೆಗಳು ಮಾರ್ಚ್ ಪಾಸ್ಟ್ ಪ್ರದರ್ಶಿಸಿದವು.