ಮುಂಬೈ: ಇಲ್ಲಿನ ಝವೇರಿ ಬಜಾರ್ ಪ್ರದೇಶದಲ್ಲಿ ಜಿಎಸ್‌ಟಿ ಇಲಾಖೆ ನಡೆಸಿದ ದಾಳಿಯಲ್ಲಿ 9 ಕೋಟಿ 78 ಲಕ್ಷ ರೂಪಾಯಿ ನಗದು ಮತ್ತು 19 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಮೆಸರ್ಸ್ ಚಾಮುಂಡ ಬುಲಿಯನ್ ಕಂಪನಿ ಮೇಲೆ ದಾಳಿ ನಡೆಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಝವೇರಿ ಬಜಾರ್ ಪ್ರದೇಶದಲ್ಲಿ ಸಂದೇಶ ಚಾಮುಂಡಾ ಬುಲಿಯನ್ ಕಂಪನಿ ಇದೆ. ಕಂಪನಿಯ ವಹಿವಾಟು 2019-20ರಲ್ಲಿ 22.3 ಕೋಟಿ ರೂ., 2020-21ರಲ್ಲಿ ರೂ.652 ಕೋಟಿ ಮತ್ತು 2021-22ರಲ್ಲಿ ರೂ.1764 ಕೋಟಿಗೆ ಏರಿಕೆಯಾಗಿದೆ. ಈ ವಿಷಯ ತಿಳಿದ ಜಿಎಸ್‌ಟಿ ಇಲಾಖೆ ಶುಕ್ರವಾರ ತಡರಾತ್ರಿ ಕಂಪನಿ ಮೇಲೆ ದಾಳಿ ನಡೆಸಿದೆ.