ಕರ್ನಾಟಕ

karnataka

ETV Bharat / bharat

ಜಿಎಸ್​ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳಿಗೆ ಪರಿಹಾರ ವಿಷಯವೇ ಮುಖ್ಯ ಅಜೆಂಡಾ

2026 ರವರೆಗೆ ಜಿಎಸ್​ಟಿ ನಿಯಮಗಳ ಅಡಿಯಲ್ಲಿ ಸುಮಾರು 4 ವರ್ಷಗಳವರೆಗೆ ಪರಿಹಾರ ಸೆಸ್ ವಿಧಿಸುವ ವಿಸ್ತರಣೆಯನ್ನು ಸೂಚಿಸುವ ಮೂಲಕ ಹಣಕಾಸು ಸಚಿವಾಲಯವು ಕಳೆದ ವಾರದ ಕೊನೆಯಲ್ಲಿ ಈ ವಿಷಯದ ಕುರಿತು ಒಂದು ಹಂತದ ನಿರ್ಣಯ ಮಾಡಿದೆ. ಇದರ ಅಡಿಯಲ್ಲಿ ಪರಿಹಾರ ಸೆಸ್ ಅನ್ನು ಜುಲೈ 1, 2022 ರಿಂದ ಮಾರ್ಚ್ 31, 2026 ರವರೆಗೆ ವಿಧಿಸಲಾಗುವುದು.

GST Council meeting begins today: Compensation to states a big fault line
GST Council meeting begins today: Compensation to states a big fault line

By

Published : Jun 28, 2022, 5:20 PM IST

2022ರಲ್ಲಿ ಜಿಎಸ್​ಟಿ ಮಂಡಳಿಯ ಪ್ರಥಮ ಸಭೆಯು ಇಂದಿನಿಂದ ಚಂಡೀಗಢನಲ್ಲಿ ಆರಂಭವಾಗಿದೆ. ಜುಲೈ 2017 ರಲ್ಲಿ ಒಂದು ರಾಷ್ಟ್ರ ಒಂದು ತೆರಿಗೆ ಯೋಜನೆ ಜಾರಿಯಾದಾಗಿನಿಂದ ಇದೇ ಮೊದಲ ಬಾರಿಗೆ ಜಿಎಸ್​ಟಿ ಮಂಡಳಿಯ ಸಭೆ ಒಂದು ದಿನದ ಬದಲಾಗಿ ಎರಡು ದಿನ ನಡೆಯುತ್ತಿದೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಹಾರ ಹಂಚುವ ವಿಷಯವೇ ಇಲ್ಲಿ ಪ್ರಧಾನವಾಗಿರಲಿದೆ. ಪರಿಹಾರ ಪಡೆಯುವ ವಿಷಯದಲ್ಲಿ ಹಲವಾರು ರಾಜ್ಯ ಸರ್ಕಾರಗಳು ಕೇಂದ್ರದ ವಿರುದ್ಧ ತಿರುಗಿ ಬಿದ್ದಿವೆ. ಈ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಭಿನ್ನಾಭಿಪ್ರಾಯ ಉತ್ತುಂಗದಲ್ಲಿರುವ ಸಮಯದಲ್ಲಿ ಹಣಕಾಸು ವಿಚಾರಗಳ ಬಗ್ಗೆ ಒಮ್ಮತ ಮೂಡಿಸುವುದು ಸವಾಲಿನ ವಿಷಯವಾಗಲಿದೆ.

2026 ರವರೆಗೆ ಜಿಎಸ್​ಟಿ ನಿಯಮಗಳ ಅಡಿಯಲ್ಲಿ ಸುಮಾರು 4 ವರ್ಷಗಳವರೆಗೆ ಪರಿಹಾರ ಸೆಸ್ ವಿಧಿಸುವ ವಿಸ್ತರಣೆಯನ್ನು ಸೂಚಿಸುವ ಮೂಲಕ ಹಣಕಾಸು ಸಚಿವಾಲಯವು ಕಳೆದ ವಾರ ಒಂದು ಹಂತದ ನಿರ್ಣಯ ಮಾಡಿದೆ. ಇದರ ಅಡಿಯಲ್ಲಿ ಪರಿಹಾರ ಸೆಸ್ ಅನ್ನು ಜುಲೈ 1, 2022 ರಿಂದ ಮಾರ್ಚ್ 31, 2026 ರವರೆಗೆ ವಿಧಿಸಲಾಗುವುದು.

ಕಳೆದ ಕೆಲವು ತಿಂಗಳುಗಳ ಅವಧಿಯಲ್ಲಿ ಜಿಎಸ್‌ಟಿ ಸಂಗ್ರಹಣೆಗಳು ಏರಿಕೆ ಕಂಡಿವೆ. ಕೋವಿಡ್​ ಸಾಂಕ್ರಾಮಿಕ ರೋಗವು ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ದೀರ್ಘಕಾಲದವರೆಗೆ ಜಿಎಸ್​ಟಿ ಸಂಗ್ರಹಣೆಯ ಹಿನ್ನಡೆಯ ನಂತರ ಈಗ ನಿಧಾನಗತಿಯ ಹೆಚ್ಚಳವಾಗಿದೆ.

ಸರಕು ಮತ್ತು ಸೇವಾ ತೆರಿಗೆ (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017 ರ ಅಡಿಯಲ್ಲಿ, ಜಿಎಸ್‌ಟಿ ಆಡಳಿತವನ್ನು ಜಾರಿಗೆ ತಂದಾಗಿನಿಂದ ಐದು ವರ್ಷಗಳವರೆಗೆ ಕಾಯ್ದೆ ಜಾರಿಗೊಳಿಸುವುದರಿಂದ ಉಂಟಾಗುವ ನಷ್ಟಕ್ಕೆ ರಾಜ್ಯಗಳಿಗೆ 2015-16 ರ ಮೂಲ ವರ್ಷದಿಂದ ಶೇ 14 ರಷ್ಟು ಸಂಯೋಜಿತ ದರದಲ್ಲಿ ಪರಿಹಾರ ನೀಡುವುದಾಗಿ ಈ ಮಧ್ಯೆ ಖಾತರಿ ನೀಡಲಾಯಿತು. (ಜುಲೈ 2017).

ಸೆಪ್ಟೆಂಬರ್ 2021 ರ ಲಕ್ನೋ ಸಭೆಯ ನಂತರ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ಜೂನ್ 2022 ರಿಂದ ರಾಜ್ಯಗಳು ವ್ಯಾಟ್‌ನಂಥ ತೆರಿಗೆಗಳನ್ನು ಒಳಗೊಳ್ಳುವುದರಿಂದ ರಾಜ್ಯಗಳ ಆದಾಯದ ಕೊರತೆಯನ್ನು ಸರಿದೂಗಿಸುವ ನಿಯಮವು ಕೊನೆಗೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದರು. ಆದಾಗ್ಯೂ, ಐಷಾರಾಮಿ ಮತ್ತು ದೋಷಪೂರಿತ ಸರಕುಗಳ ಮೇಲೆ ವಿಧಿಸಲಾದ ಪರಿಹಾರ ಸೆಸ್ ಅನ್ನು ಪ್ರಾಥಮಿಕವಾಗಿ 2020-21 ಮತ್ತು 2021-22 ರಲ್ಲಿ ರಾಜ್ಯಗಳಿಗೆ ಜಿಎಸ್​ಟಿ ಆದಾಯ ನಷ್ಟವನ್ನು ಸರಿದೂಗಿಸಲು ಮತ್ತು ಸಾಲವನ್ನು ಮರುಪಾವತಿಸಲು ಮಾರ್ಚ್ 2026 ರವರೆಗೆ ಮುಂದುವರಿಸಲು ನಿರ್ಧರಿಸಲಾಯಿತು.

ABOUT THE AUTHOR

...view details