ಕರ್ನಾಟಕ

karnataka

ETV Bharat / bharat

ತಾಜ್​ಮಹಲ್ ನೋಡಲು ಬಂದ ಸ್ಪೇನ್ ಪ್ರವಾಸಿಗರ ಮೇಲೆ ಮಂಗಗಳ ದಾಳಿ

ತಾಜ್​ಮಹಲ್​ನಲ್ಲಿ ಪ್ರವಾಸಿಗರ ಮೇಲೆ ಮಂಗಗಳ ದಾಳಿ ಹೆಚ್ಚಾಗುತ್ತದೆ. ಈ ವಾರದಲ್ಲಿ ಎರಡು ಪ್ರಕರಣ ನಡೆದಿದೆ.

group-of-monkeys-attacked-spanish-tourist-who-came-to-see-taj-mahal
ತಾಜ್ ಮಹಲ್ ನೋಡಲು ಬಂದ ಸ್ಪೇನ್ ಪ್ರವಾಸಿಗರ ಮೇಲೆ ಮಂಗಗಳ ಹಿಂಡು ದಾಳಿ

By

Published : Sep 21, 2022, 8:45 PM IST

ಆಗ್ರಾ (ಉತ್ತರ ಪ್ರದೇಶ):ತಾಜ್​ಮಹಲ್​ನಲ್ಲಿ ಮಂಗಳ ಕಾಟ ಹೆಚ್ಚಾಗಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗಷ್ಟೇ ತಾಜ್ ಮಹಲ್ ನೋಡಲು ಬಂದಿದ್ದ ಸ್ಪೇನ್ ಮಹಿಳೆಯೊಬ್ಬರ ಮೇಲೆ ಮಂಗಗಳು ದಾಳಿ ನಡೆಸಿದ್ದವು. ಇಂದು ತಾಜ್​ಮಹಲ್​ನ ಈಸ್ಟ್ ಗೇಟ್‌ನಲ್ಲಿ ಮತ್ತೆ ಪ್ರವಾಸಿಗರ ಮೇಲೆ ಮಂಗಗಳು ದಾಳಿ ಮಾಡಿವೆ.

ಮಂಗಗಳ ಗುಂಪೊಂದು ಈಸ್ಟ್ ಗೇಟ್‌ನಲ್ಲಿ ಟಿಕೆಟ್​ಗಾಗಿ ನಿಂತಿದ್ದ ಸ್ಪ್ಯಾನಿಷ್ ಪ್ರವಾಸಿ ಯುವತಿ ಕ್ರಿಸ್ಟಿನಾ ಮೇಲೆ ದಾಳಿ ಮಾಡಿವೆ. ಕೂಡಲೇ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಟಿಕೆಟ್​ ಪಡೆಯಲು ಕ್ರಿಸ್ಟಿನಾ ನಿಂತಿದ್ದಾಗ ಸುತ್ತುವರೆದ ಮಂಗಗಳು ದಾಳಿ ಮಾಡಿವೆ. ಈ ವೇಳೆ ಕ್ರಿಸ್ಟಿನ ಕೆಲಗೆ ಬಿದ್ದಿದ್ದಾರೆ. ಆಕೆಗೆ ಮಂಗಗಳು ಪರಚಿ ಮತ್ತು ಕಚ್ಚಿ ಗಾಯಮಾಡಿವೆ. ಆಸ್ಪತ್ರೆಯಲ್ಲಿ ಆ್ಯಂಟಿ ರೇಬಿಸ್ ಇಂಜೆಕ್ಷನನ್ನು ಕ್ರಿಸ್ಟಿನಾ ನೀಡಲಾಗಿದೆ.

ತಾಜ್​ಮಹಲ್​ನಲ್ಲಿ ಪ್ರವಾಸಿಗರ ಮೇಲೆ ಮಂಗಗಳು ಈ ಹಿಂದೆಯೂ ದಾಳಿ ಮಾಡಿವೆ. ಆದರೆ ಇಲ್ಲಿನ ಇಲಾಖೆ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಎಎಸ್‌ಐ ಮತ್ತು ಜಿಲ್ಲಾಡಳಿತ ಮಂಗಗಳ ಕಾಟಕ್ಕೆ ಯೋಜನೆ ರೂಪಿಸಿಲ್ಲ.

ಇದನ್ನೂ ಓದಿ :ರೇಪಿಸ್ಟ್​ಗಳಿಂದ ತಪ್ಪಿಸಿಕೊಂಡು ವಿವಸ್ತ್ರವಾಗಿ ಓಡಿದ ಬಾಲಕಿ..ಮೊರಾದಾಬಾದ್​ನಲ್ಲಿ ಹೇಯ ಕೃತ್ಯ ಬೆಳಕಿಗೆ


ABOUT THE AUTHOR

...view details