ಕರ್ನಾಟಕ

karnataka

ETV Bharat / bharat

ಹೆಲಿಕಾಪ್ಟರ್​ ಪತನ: ಶೌರ್ಯಚಕ್ರ ಪುರಸ್ಕೃತ ಕ್ಯಾ.​​ವರುಣ್​​ ಸಿಂಗ್​​​ ಆರೋಗ್ಯ ಸ್ಥಿತಿ ಸ್ಥಿರ, ಆದ್ರೂ ಗಂಭೀರ - ಕ್ಯಾಪ್ಟನ್​ ವರುಣ್​ ಸಿಂಗ್​​​

ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬದುಕುಳಿದಿರುವ ಕ್ಯಾಪ್ಟನ್​​ ವರುಣ್​​ ಸಿಂಗ್​ ಅವರಿಗೆ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಿದ್ದು, ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

Group Captain Varun Singh
Group Captain Varun Singh

By

Published : Dec 10, 2021, 10:09 PM IST

ಬೆಂಗಳೂರು: ತಮಿಳುನಾಡಿನ ಕುನೂರ್​​ನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಗ್ರೂಪ್​ ಕ್ಯಾಪ್ಟನ್​ ವರುಣ್​​ ಸಿಂಗ್ ಮಾತ್ರ​​ ಬದುಕುಳಿದಿದ್ದು, ಅವರಿಗೆ ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಲಭ್ಯವಾಗಿರುವ ಇತ್ತೀಚಿನ ಮಾಹಿತಿ ಪ್ರಕಾರ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆದರೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸೇನಾ ಹೆಲಿಕಾಪ್ಟರ್​​ ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನ ತಮಿಳುನಾಡಿನ ವೆಲ್ಲಿಂಗ್ಟನ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಕಾರಣ ಸುಲೂರು ಏರ್​ಬೇಸ್​ನಿಂದ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈಗಲೂ ಲೈಫ್​ ಸಪೋರ್ಟ್​​ನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ನಿನ್ನೆ ವೆಲ್ಲಿಂಗ್ಟನ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರು, ಕ್ಯಾಪ್ಟನ್​​ ವರುಣ್​ ಸಿಂಗ್​ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂದಿನ 48 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು.

ಇದನ್ನೂ ಓದಿರಿ:ಗೋವಾದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಪ್ರಿಯಾಂಕಾ.. ಬುಡಕಟ್ಟು ಜನಾಂಗದ ಜೊತೆ ಡ್ಯಾನ್ಸ್​!

ಇದನ್ನೂ ಓದಿರಿ: ನಂಬಿಕೆ, ಭರವಸೆ ಕಳೆದುಕೊಳ್ಳಬೇಡಿ.. ಸಾವು ಬದುಕಿನ ಮಧ್ಯೆ ಹೋರಾಡ್ತಿರೋ ವರುಣ್​ ಸಿಂಗ್​ ಮನದಾಳವಿದು!

ಈಗಾಗಲೇ ಆಸ್ಪತ್ರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ತಾವರ್​ಚೆಂದ್​ ಗೆಹ್ಲೋಟ್​ ಭೇಟಿ ನೀಡಿ, ಆರೋಗ್ಯದ ಮಾಹಿತಿ ಪಡೆದುಕೊಂಡರು. ಈ ವೇಳೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಹ ಹೊರಹಾಕಿದ್ದಾರೆ.

ತಮಿಳುನಾಡಿನ ನೀಲಿಗಿರಿಯಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ 14 ಜನರ ಪೈಕಿ ಸೇನಾ ಮುಖ್ಯಸ್ಥ ಬಿಪಿನ್​ ರಾವತ್​​ ಅವರ ಧರ್ಮಪತ್ನಿ ಸೇರಿದಂತೆ 13 ಜನರು ಹುತಾತ್ಮರಾಗಿದ್ದು, ಇಂದು ಅಂತ್ಯಕ್ರಿಯೆ ನಡೆಸಲಾಗಿದೆ.

ABOUT THE AUTHOR

...view details