ಕರ್ನಾಟಕ

karnataka

ETV Bharat / bharat

ಮದುವೆ ಮಂಟಪದಿಂದ ಓಡಿ ಹೋದ ಪ್ರಿಯಕರ: 20 ಕಿಮೀ ಬೆನ್ನಟ್ಟಿ ಹಿಡಿದ ಪ್ರಿಯತಮೆ! - ವಿಚಿತ್ರ ಪ್ರೇಮಕಥೆ

ಮದುವೆ ಮಂಟಪದಿಂದ ಓಡಿ ಹೋಗುತ್ತಿದ್ದಾಗ ಪ್ರಿಯಕರನನ್ನು ಯುವತಿಯೊಬ್ಬಳು 20 ಕಿಮೀ ಬೆನ್ನಟ್ಟಿ ಹಿಡಿದು ವಿವಾಹ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ವರದಿಯಾಗಿದೆ.

Groom runs away from wedding in UPs Bareilly; bride chases 20 km
ಮದುವೆ ಮಂಟಪದಿಂದ ಓಡಿ ಹೋದ ಪ್ರಿಯಕರ: 20 ಕಿಮೀ ಬೆನ್ನಟ್ಟಿ ಹಿಡಿದ ಪ್ರಿಯತಮೆ!

By

Published : May 23, 2023, 6:47 PM IST

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿಯಲ್ಲಿ ವಿಚಿತ್ರ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಗಳು ಮತ್ತು ಪ್ರೇಮ ವಿವಾಹಕ್ಕೆ ಕುಟುಂಬಸ್ಥರಿಂದ ಅಡ್ಡಿ ಎದುರಾಗುವುದು ಸಾಮಾನ್ಯ. ಹೀಗಾಗಿ ಪೋಷಕರ ಪ್ರತಿರೋಧವನ್ನು ತಪ್ಪಿಸಲು ಮತ್ತು ಮದುವೆಯಾಗುವ ನಿಟ್ಟಿನಲ್ಲಿ ಪ್ರೇಮಿಗಳು ಓಡಿ ಹೋಗುವುದನ್ನೂ ಕಾಣಬಹುದು. ಆದರೆ, ಇಲ್ಲೊಬ್ಬ ಪ್ರಿಯಕನೊಬ್ಬ ಮದುವೆ ಮಂಟಪದಲ್ಲಿ ತನ್ನ ಪ್ರಿಯತಮೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ಆ ಯುವತಿ 20 ಕಿಲೋಮೀಟರ್​ ದೂರ ಬೆನ್ನಟ್ಟಿ ಹೋಗಿ ತನ್ನ ಪ್ರೇಮಿಯನ್ನು ಹಿಡಿದು ವಿವಾಹವಾಗಿದ್ದಾಳೆ.

ಇಲ್ಲಿನ ಬರದರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಬರೇಲಿಯ ಯುವತಿ ಎರಡೂವರೆ ವರ್ಷಗಳಿಂದ ಬಿಸೌಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಭಾನುವಾರ ದೇವಸ್ಥಾನವೊಂದರಲ್ಲಿ ಅಂತೂ ಇಂತು ಎಂಬಂತೆ ಯುವತಿ ತನ್ನ ಪ್ರಿಯಕರೊಂದಿಗೆ ಹಸೆಮಣೆ ಏರುವಲ್ಲಿ ಸಫಲವಾಗಿದ್ದಾಳೆ.

ನಡೆದಿದ್ದೇನು?:ಬರೇಲಿ ನಿವಾಸಿಯಾದ ಯುವತಿ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಬಿಸೌಲಿ ಪ್ರದೇಶದ ಯುವಕನೊಂದಿಗೆ ಸ್ನೇಹಿತ ಬೆಳೆದಿತ್ತು. ತನ್ನೊಂದಿಗೆ ಓದುತ್ತಿದ್ದಾಗ ಕಾರಣ ಇಬ್ಬರ ನಡುವೆ ಸಲುಗೆ ಹೆಚ್ಚಾಗಿ ಅದು ಪ್ರೀತಿಗೂ ತಿರುಗಿದೆ. ಅಲ್ಲಿಂದ ಇಬ್ಬರು ಮದುವೆಯಾಗಿ ಒಟ್ಟಿಗೆ ಜೀವಿಸುವ ನಿರ್ಧಾರಕ್ಕೂ ಬಂದಿದ್ದಾರೆ. ಈ ವಿಷಯ ಮನೆಯಲ್ಲೂ ಗೊತ್ತಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿರುವ ಕಾರಣ ಮನೆಯವರೂ ಸಹ ಒಪ್ಪಿಕೊಂಡಿದ್ದಾರೆ.

ಅಂತೆಯೇ, ಇಬ್ಬರಿಗೂ ಮದುವೆ ನಿಶ್ಚಯ ಮಾಡಿದ್ದು, ಭಾನುವಾರ ದೇವಸ್ಥಾನದಲ್ಲಿ ಮದುವೆಯನ್ನೂ ನಿಗದಿ ಮಾಡಿದ್ದರು. ಹೀಗಾಗಿ ಯುವತಿ ಮದುವೆ ಸಮವಸ್ತ್ರದಲ್ಲಿ ಸಿದ್ಧವಾಗಿ ಬಂದಿದ್ದಳು. ಮತ್ತೊಂದೆಡೆ, ಯುವತಿ ತನ್ನ ಮದುವೆ ಬಟ್ಟೆ ತರಲು ಹೋಗುವುದಾಗಿ ಅಲ್ಲಿಂದ ದೇವಸ್ಥಾನದಿಂದ ಹೋಗಿದ್ದಾನೆ. ಆದರೆ, ತುಂಬಾ ಹೊತ್ತು ಕಳೆದರೂ ಮರಳಿ ಬಂದಿಲ್ಲ. ಇದರಿಂದ ಅನುಮಾನಗೊಂಡು ಆತನಿಗೆ ಯುವತಿ ಕರೆ ಮಾಡಿದ್ದಾಳೆ. ಆಗ ತಾಯಿಯನ್ನು ಕರೆದುಕೊಂಡು ಬರುತ್ತಿದ್ದೇನೆ ಎಂದು ಮತ್ತೊಂದು ನೆಪ ಹೇಳಿದ್ದಾನೆ. ಕೊನೆಗೆ ಮದುವೆಯಿಂದ ತಪ್ಪಿಸಿಕೊಳ್ಳಲು ಇಂತಹ ಸುಳ್ಳಗಳನ್ನು ಹೇಳುತ್ತಿದ್ದಾನೆ ಎಂದು ಪ್ರಿಯತಮೆ ಅರಿತುಕೊಂಡಿದ್ದಾಳೆ.

ಇದನ್ನೂ ಓದಿ:ಮದುವೆಗೆ ಮುನ್ನ ಪ್ರೇಮ.. ಗಂಡನ ಕಳೆದುಕೊಂಡರೂ ಯುವತಿಗೆ ಕಿರುಕುಳ: ಯುವಕನ ಕೊಂದ ಕುಟುಂಬಸ್ಥರು

ಹೀಗಾಗಿ ಯುವತಿ ತನ್ನ ಕುಟುಂಬದ ಸದಸ್ಯರಿಗೆ ವಿಷಯವನ್ನು ಗಮನಕ್ಕೆ ತಂದಿದ್ದಾಳೆ. ಆಗ ಎಲ್ಲರೊಂದಿಗೆ ಸೇರಿಕೊಂಡು ಪ್ರಿಯಕರನ್ನು ಹಿಡಿಯಲು ಹೋಗಿದ್ದಾಳೆ. ಆಗ ಬಸ್​ನಲ್ಲಿ ಯುವಕ ಪರಾರಿಯಾಗುತ್ತಿರುವುದು ಗೊತ್ತಾಗಿದ್ದು, 20 ಕಿಲೋಮೀಟರ್ ಕ್ರಮಿಸಿ ಭಮೋರಾ ಎಂಬ ಪ್ರದೇಶದಲ್ಲಿ ಬಸ್​ನಿಂದ ಇಳಿಸಿದ್ದಾರೆ. ಇದಾದ ನಂತರವೂ ಯುವಕ ಮದುವೆಯಾಗಲು ನಾನಾ ಕಾರಣ ಹೇಳಿದ್ದಾನೆ. ಆದರೆ, ಪಟ್ಟು ಬಿಡಿದ ಯುವತಿ ತನ್ನ ಪ್ರಿಯತನನ್ನು ವರಿಸಿದ್ದಾಳೆ ಎಂದು ಭಮೋರಾ ನಿವಾಸಿ ರಾಮದಾಸ್ ವಿವರಿಸಿದ್ದಾರೆ. ಈ ಬಗ್ಗೆ ಭಮೋರಾ ಪೊಲೀಸ್ ಠಾಣೆಯ ಪ್ರಭಾರಿ ರೋಹಿತ್ ಶರ್ಮಾ ಪ್ರತಿಕ್ರಿಯಿಸಿ, ಈ ಘಟನೆ ಬಗ್ಗೆ ಯಾರೂ ತನ್ನ ಪೊಲೀಸರನ್ನು ಸಂಪರ್ಕಿಸಿಲ್ಲ. ಹೀಗಾಗಿ ಇದು ನಮ್ಮ ಗಮನಕ್ಕೆ ಬಂದಿಲ್ಲ. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಪ್ರೀತಿಸುತ್ತಿದ್ದ ಪ್ರೇಯಸಿಗಾಗಿ ಜೈಲು ಸೇರಿದ್ದ ಪ್ರಿಯಕರ... ಜೈಲಿನಲ್ಲಿದ್ದು ಕೈದಿಯಾಗಿ ಪ್ರಿಯತಮೆ ವರಿಸಿದ ಪ್ರೇಮಿ...!

ABOUT THE AUTHOR

...view details