ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಇಂದು ಮುನ್ಸಿಪಲ್ ಚುನಾವಣೆ ನಡೆಯುತ್ತಿದೆ. ಮದುವೆ ಮಂಟಪದಿಂದ ನವಜೋಡಿಯೊಂದು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.
ವಾಸ್ತವವಾಗಿ ಸುಧೀರ್ ರಾಣಾ ಎಂಬ ವ್ಯಕ್ತಿ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ವಿವಾಹವಾಗಿದ್ದಾರೆ. ನಂತರ ಅವರು ಅವರ ಪತ್ನಿಯೊಂದಿಗೆ ನೇರವಾಗಿ ಮತಗಟ್ಟೆಯನ್ನು ತಲುಪಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಸುಧೀರ್ ರಾಣಾ ಅವರ ನಿವಾಸ ಬುರಾರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದೆ.