ಸೋನಭದ್ರ(ಉತ್ತರಪ್ರದೇಶ):ಉತ್ತರ ಭಾರತದ ರಾಜ್ಯಗಳಲ್ಲಿ ಮದುವೆ ಸೇರಿದಂತೆ ಮತ್ತಿತರ ಸಮಾರಂಭಗಳಲ್ಲಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಇದು ಶೌರ್ಯದ ಸಂಕೇತವಾಗಿ ರೂಢಿಯಾಗಿದೆ. ಈ ರೀತಿ ಗುಂಡು ಹಾರಿಸಲು ಹೋದ ವರನೊಬ್ಬ ತನ್ನ ಮದುವೆಯ ಮೆರವಣಿಗೆಯಲ್ಲಿ ಸ್ನೇಹಿತನನ್ನೇ ಬಲಿ ತೆಗೆದುಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮದುವೆಯ ಸಂಭ್ರಮಾಚರಣೆಯಲ್ಲಿದ್ದ ಕುಟುಂಬಸ್ಥರು ಗುಂಡೇಟಿಗೆ ಸ್ನೇಹಿತ ಮೃತಪಟ್ಟ ಬಳಿಕ ಶೋಕದಲ್ಲಿ ಮುಳುಗುವಂತಾಗಿದೆ.
ಘಟನೆ ಏನು?:ಮದುವೆಯ ಬಳಿಕ ವರನನ್ನು ರಥದಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ಈ ವೇಳೆ ರಥದ ಮೇಲಿದ್ದ ವರ ಸಂಭ್ರಮದ ಭಾಗವಾಗಿ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ಅದು ಪಕ್ಕದಲ್ಲೇ ಇದ್ದ ತನ್ನ ಸ್ನೇಹಿತನಿಗೆ ಬಡಿದಿದೆ.