ಭಾಗಲ್ಪುರ(ಬಿಹಾರ):ಬಿಹಾರ ರಾಜ್ಯದಲ್ಲಿ ಹಲವು ವಿಚಿತ್ರ ಪ್ರಕರಣಗಳು ಮುನ್ನೆಲೆಗೆ ಬರುವುದು ಸಾಮಾನ್ಯವಾಗಿದೆ. ಈ ಸ್ಟೋರಿ ನೋಡಿದರೆ, ಎಲ್ಲರಿಗೂ ಆಶ್ಚರ್ಯ ಉಂಟಾಗುತ್ತದೆ. ಹೌದು, ನಿಜವಾಗಿಯೂ ಇಂತಹದ್ದೊಂದು ಘಟನೆ ಸಂಭವಿಸಿದೆ. ವಾಸ್ತವವಾಗಿ ವಧು ವೇಷದಲ್ಲಿ ಯುವತಿಯೊಬ್ಬರು ತನ್ನ ವರನಿಗಾಗಿ ಕಾಯುತ್ತಿದ್ದಳು. ಆದರೆ, ವರ ಮಹಾಶಯ ತನ್ನ ಮದುವೆಗೆ ಹೋಗುವುದನ್ನೇ ಮರೆತು ಬಿಟ್ಟಿದ್ದಾನೆ.
ಮದುವೆಗೆ ಹೋಗುವುದನ್ನೇ ಮರೆತ ವರ: ಸುಲ್ತಾನ್ಗಂಜ್ ಗ್ರಾಮವೊಂದರಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕಹಲ್‌ಗಾಂವ್‌ನ ಅಂತಿಚಾಕ್‌ನಿಂದ ಮದುವೆ ಮೆರವಣಿಗೆ ಬರಬೇಕಿತ್ತು. ಆದರೆ, ಮದುವೆಗೂ ಮುನ್ನ ವರ ಕಂಠಪೂರ್ತಿ ಕುಡಿದಿದ್ದಾನೆ. ಮತ್ತೊಂದೆಡೆ ಅಂತಿಚಾಕ್ ಗ್ರಾಮದಲ್ಲಿ, ಇಡೀ ಕುಟುಂಬ ಮತ್ತು ವಧುವಿನ ಅತಿಥಿಗಳು ಮದುವೆಗಾಗಿ ಕಾಯುತ್ತಿದ್ದರು. ಆದರೆ, ವರನು ಮದುವೆ ಕಾರ್ಯಕ್ರಮಕ್ಕೆ ಬರಲೇ ಇಲ್ಲ.
ಮದುವೆಯಾಗಲು ನಿರಾಕರಿಸಿದ ಯುವತಿ:ವರ ಮಿಯಾನ್ ಕುಡಿದು ಬಂದಿದ್ದ ವೇಳೆ, ಆತನಿಗೆ ದೊಡ್ಡ ಆಘಾತವಾಗಿದೆ. ನಂತರ ವರನು ತನ್ನ ವಧುವನ್ನು ಮದುವೆಯಾಗಲು ಬಂದಿದ್ದ. ಆದರೆ, ಈ ಹುಡುಗ ತನ್ನ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲ ಹಾಗೂ ಇಡೀ ಜೀವನವನ್ನು ಕುಡುಕನೊಂದಿಗೆ ಕಳೆಯುವುದು ಸುಲಭವಲ್ಲ ಎಂದು ವಧು ಅರಿತುಕೊಂಡಿದ್ದಾಳೆ. ಅದಕ್ಕಾಗಿಯೇ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಾಳೆ.
ವರನ ಹಾಗೂ ಆತನ ಸಂಬಂಧಿಕರು ಒತ್ತೆಯಾಳಾಗಿ ಇರಿಸಲಾಗಿತ್ತು:ಇದೇ ವೇಳೆ ಮದುವೆಗೆ ತಗಲುವ ವೆಚ್ಚವನ್ನು ವಾಪಸ್ ನೀಡುವಂತೆ ಯುವತಿ ಕುಟುಂಬಸ್ಥರು ಒತ್ತಾಯಿಸಿದರು. ಇದಕ್ಕಾಗಿ ಹುಡುಗಿಯ ಸಂಬಂಧಿಕರು, ವರ ಹಾಗೂ ಆತನ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಆ ನಂತರ ಹುಡುಗನ ಕಡೆಯಿಂದ ಕೆಲವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ಹಣ ತರಲು ವರನ ಮನೆಗೆ ಹೋದರು. ಈ ನಡವೆ ವರವನನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಬಗ್ಗೆ ಸ್ವತಃ ಹುಡುಗಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದರು.
ಇಲ್ಲಿ ನಡೆದಿತ್ತು ವಿಚಿತ್ರ ಮದುವೆ:ಇನ್ನೊಂದು ಪ್ರಕರಣದಲ್ಲಿಪ್ರೀತಿ ಹಾಗೂ ಸೇಡಿನ ವಿಚಿತ್ರ ಘಟನೆ ಬಿಹಾರದಲ್ಲಿ ಜರುಗಿತ್ತು. ಮಾನಸಿಕ ಖಿನ್ನತೆಗೊಳಗಾದ ಪತಿಯೊಬ್ಬ ಇಲ್ಲಿನ ಖಗರಿಯಾ ಎಂಬಲ್ಲಿ ತನ್ನ ಹೆಂಡತಿಯ ಪ್ರೇಮಿಯ ಪತ್ನಿಯನ್ನೇ ವಿವಾಹವಾಗಿದ್ದನು. ನಾಲ್ಕು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಹೆಂಡತಿ ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಆತ ಈ ರೀತಿಯ ವಿಲಕ್ಷಣ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಹುಟ್ಟಿಸಿತ್ತು.