ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶದ ಕೆಲವೆಡೆ ಕರ್ಫ್ಯೂ ಜಾರಿ.. ಸರಳ ವಿವಾಹ-ಬೈಕ್​ನಲ್ಲಿ ವಧುವನ್ನು ಕರೆದೊಯ್ದ ವರ.. - ಮಧ್ಯಪ್ರದೇಶ ಕರ್ಫ್ಯೂ ನಡುವೆ ಮದುವೆ

ಕರ್ಫ್ಯೂ ನಡುವೆಯೂ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವಧುವನ್ನು ವರ ತನ್ನ ಬೈಕ್​ನಲ್ಲೇ ಕರೆದೊಯ್ದಿದ್ದಾನೆ..

Groom drives bride home on a motorcycle amid curfew in Khargone
ಬೈಕ್​ನಲ್ಲಿ ವಧುವನ್ನು ಕರೆದೊಯ್ದ ವರ

By

Published : Apr 17, 2022, 3:41 PM IST

ಮಧ್ಯಪ್ರದೇಶ :ಕಳೆದ ಭಾನುವಾರ ರಾಮನವಮಿ ಆಚರಣೆ ವೇಳೆ ಮಧ್ಯಪ್ರದೇಶದಲ್ಲಿ ಕೋಮುಗಲಭೆ ಭುಗಿಲೆದ್ದ ಹಿನ್ನೆಲೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಆ ರಾಜ್ಯದ ಮೂರು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದರು. ಹಿಂಸಾಚಾರ ಪೀಡಿತ ಖಾರ್ಗೋನ್‌ನಲ್ಲಿ ಕಟ್ಟುನಿಟ್ಟಾದ ಕರ್ಫ್ಯೂ ನಡುವೆಯೂ ವಿವಾಹ ನಡೆದಿದೆ. ವಧುವನ್ನು ವರ ತನ್ನ ಬೈಕ್​ನಲ್ಲಿ ಕರೆದೊಯ್ದಿದ್ದಾನೆಂದು ವರದಿಯಾಗಿದೆ.

ತೋಟರಾಮ್ ನಾಗರಾಜ್ ಅವರ ಪುತ್ರಿ ದೀಪಿಕಾ ಶುಕ್ರವಾರದಂದು ಲಖನ್ ಭಲ್ಸೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾರ್ಗೋನ್‌ನಲ್ಲಿ ಕಟ್ಟುನಿಟ್ಟಾದ ಕರ್ಫ್ಯೂ ಇದ್ದು, ಬಹು ಸರಳವಾಗಿ ಈ ವಿವಾಹ ನಡೆದಿದೆ. ಎರಡು ಕುಟುಂಬದವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದು, ನಂತರ ವಧುವನ್ನು ವರನೊಂದಿಗೆ ಬೈಕ್‌ನಲ್ಲಿ ಕಳುಹಿಸಲಾಯಿತು.

ನಾಲ್ಕು ತಿಂಗಳ ಹಿಂದೆಯೇ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ, ಏಪ್ರಿಲ್ 10ರ ಗಲಭೆ ನಂತರ ಕರ್ಫ್ಯೂ ಹೇರಿದ್ದರಿಂದ ಎಲ್ಲ ಸಿದ್ಧತೆಗಳು ಹಾಳಾಗಿವೆ ಎಂದು ವಧು-ವರರ ಕುಟುಂಬಸ್ಥರು ತಿಳಿಸಿದ್ದಾರೆ. ಅಲ್ಲದೇ ಯಾವುದೇ ಅದ್ಧೂರಿ ಆಚರಣೆ ಇಲ್ಲದೇ ಸರಳವಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ನಡೆದಿದೆ. ನಂತರ ಬೈಕ್​ನಲ್ಲೇ ವಧುವನ್ನು ಬೀಳ್ಕೊಡಲಾಯಿತು. ಈ ರೀತಿ ಮದುವೆ ನಡೆಯುತ್ತದೆ ಎಂದು ಊಹಿಸಿರಲಿಲ್ಲ. ಅತಿಥಿಗಳು ಬರಲು ಸಾಧ್ಯವಾಗದೇ ಇರುವುದು ಬೇಸರ ತಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ:ರಾಮನವಮಿ ಆಚರಣೆ ವೇಳೆ ಹಿಂಸಾಚಾರ : ಮಧ್ಯಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದ ಪೊಲೀಸರು

ನಗರದಲ್ಲಿ ಕರ್ಫ್ಯೂ ಇರುವುದರಿಂದ ಹಲವು ಮದುವೆಗಳು ರದ್ದಾಗಿವೆ. ಮುಂಜಾಗ್ರತಾ ಕ್ರಮವಾಗಿ ಕರ್ಫ್ಯೂ ಜಾರಿಯಲ್ಲಿದ್ದು, ಖಾರ್ಗೋನ್‌ನಲ್ಲಿ ಜನಜೀವನ ನಿಧಾನ ಗತಿಯಲ್ಲಿ ಸಹಜ ಸ್ಥಿತಿಗೆ ಮರಳುತ್ತಿದೆ. ಪೊಲೀಸರು ಈವರೆಗೆ 120ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ABOUT THE AUTHOR

...view details