ಕರ್ನಾಟಕ

karnataka

ETV Bharat / bharat

ಅದ್ಧೂರಿ ಮದುವೆ ಬಳಿಕ ವಧುವಿನ ಕನ್ಯತ್ವ ಪರೀಕ್ಷೆಗೆ ಬೇಡಿಕೆ ಇಟ್ಟ ವರ:  ನಂತರ ಆಗಿದ್ದೇನು ಗೊತ್ತಾ?

ಮದುವೆಯ ನಂತರ ಬೀಳ್ಕೊಡುವ ವೇಳೆ ವರನು ಕನ್ಯತ್ವ ಪರೀಕ್ಷೆಯ ಬೇಡಿಕೆ ನವ ವಧುವಿನ ಮುಂದೆ ಇಟ್ಟಿದ್ದಾನೆ. ವಧುವಿನ ಕಡೆ ಜನರು ವರನ ಸಂಬಂಧಿಕರ ಒತ್ತೆಯಾಳಾಗಿ ಇಟ್ಟುಕೊಂಡು, ಬೆದರಿಕೆಯೂ ಒಡ್ಡಿದ್ದಾರೆ. ಎರಡು ದಿನ ಬಳಿಕ ಪೊಲೀಸರು ಒತ್ತೆ ಇಟ್ಟುಕೊಂಡಿದ್ದ ವರನ ಸಂಬಂಧಿಕರ ಬಿಡುಗಡೆಗೊಳಿಸಿದ್ದಾರೆ.

groom Sooraj  demanded virginity test bride
ಕನ್ಯತ್ವ ಪರೀಕ್ಷೆ ಬೇಡಿಕೆ ಇಟ್ಟ ವರ ಸೂರಜ್ ಸಂಬಂಧಿಕರು

By

Published : Nov 19, 2022, 8:06 PM IST

ಮೋತಿಹಾರಿ( ಬಿಹಾರ) : ಮದುವೆ ಮುಗಿದ ಬಳಿಕ ಸಣ್ಣ ಜಗಳದಿಂದಾಗಿ ವರನೂ ತನ್ನ ವಧುವನ್ನು ಕನ್ಯತ್ವ ಪರೀಕ್ಷೆ ಇಟ್ಟಿರುವ ಪ್ರಕರಣ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ತುರ್ಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕನ್ಯತ್ವ ಪರೀಕ್ಷೆ ಬೇಡಿಕೆ ಇಟ್ಟ ವರ: ಮದುವೆಯ ನಂತರ ಬೀಳ್ಕೊಡುವ ವೇಳೆ ವರನು ಕನ್ಯತ್ವ ಪರೀಕ್ಷೆಯ ಬೇಡಿಕೆ ನವ ವಧುವಿನ ಮುಂದೆ ಇಟ್ಟಿದ್ದಾನೆ. ವರನ ಸವಾಲ್ ಕೇಳಿ ಅಲ್ಲಿದ್ದ ಜನ ದಿಗ್ಬ್ರಮೆಗೊಂಡು, ಕೋಲಾಹಲ ಸೃಷ್ಟಿಯಾಯಿತು. ಈ ಕೂಡಲೇ ಹುಡುಗಿಯ ಕಡೆ ಜನರು ವರನ ಕಡೆಯಿಂದ ಬಂದಿದ್ದ ಸಂಬಂಧಿಕರನ್ನು ಒತ್ತೆಯಾಳಾಗಿ ಇಟ್ಟುಕೊಂಡು, ಬೆದರಿಕೆಯೂ ಒಡ್ಡಿದ್ದಾರೆ.

ಸ್ಥಳೀಯ ಪಂಚಾಯಿತಿ ಪಂಚರ ನಿರ್ಧಾರವೂ ಫಲಿಸದಿದ್ದಾಗ ,ಈ ಘಟನೆ ಪೊಲೀಸರ್ ಠಾಣೆಯ ಮೆಟ್ಟಲೇರಿದೆ. ತಕ್ಷಣ ಪೊಲೀಸರು ಇದರಲ್ಲಿ ಭಾಗಿಗಳಾಗಿ ಎರಡು ದಿನಗಳ ನಂತರ ವರನ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ್ದಾರೆ. ಆದರೆ ವರನೂ ವಧುವಿಲ್ಲದೇ ಹೋಗಬೇಕಾಯಿತು.

ಅದ್ಧೂರಿ ಮದುವೆಯಲ್ಲಿ ನಡೆದಿದ್ದೇನು:ಮಾಹಿತಿ ಪ್ರಕಾರ ನ.16ರಂದು ಗುದ್ರಿ ಬೈತಾ ಅವರ ಮಗಳ ಮದುವೆ ಟರ್ಕೌಲಿಯಾ ಚಾರ್ಗಾದಲ್ಲಿಅದ್ಧೂರಿಯಾಗಿ ನೆರವೇರಿತು. ಈ ವೇಳೆ ಅಹ್ವಾರ್ ಶೇಖ್ ಗ್ರಾಮದಿಂದ ಅಪಾರ ಜನರ ಮೆರವಣಿಗೆಯೂ ಬಂದಿತು. ವಧು ಕಡೆ ಜನರು ಉಪಹಾರ ಮತ್ತು ರಾತ್ರಿ ಊಟ ಮಾಡಿದರು. ಶಾಸ್ತ್ರೋಸ್ತಕ್ತವಾಗಿ ಮದುವೆಯೂ ಜರುಗಿತು.

ಆದರೆ ನವೆಂಬರ್ 17 ರಂದು ಬೆಳಗ್ಗೆ ಹುಡುಗಿ ಬೀಳ್ಕೊಡುವ ವೇಳೆ ಹುಡುಗ - ಹುಡುಗಿ ನಡುವೆ ಜಗಳವಾಗಿದೆ. ವಧು ವರ ಜಗಳ ಮಾಡುತ್ತಿದ್ದ ತಳ್ಳಾಡಿದ್ದಾರೆ. ಈ ವಿಚಾರದಲ್ಲಿ ಕೋಪಗೊಂಡ ವರ ಸೂರಜ್, ವಧುವಿನ ಕನ್ಯತ್ವ ಪರೀಕ್ಷೆಗೆ ಬೇಡಿಕೆ ಇಟ್ಟಿದ್ದಾನೆ. ನಂತರ ವಿವಾದ ದೊಡ್ಡ ಜಗಳಕ್ಕೆ ದಾರಿಮಾಡಿಕೊಟ್ಟಿದೆ.

ನಂತರ ಹುಡುಗಿಯ ಪೋಷಕರು ಕಾಗದದ ಮೇಲೆ ಒಪ್ಪಂದ ಮಾಡಿಕೊಂಡು, ವಧು ತನ್ನ ಅತ್ತೆಯ ಮನೆಯಲ್ಲಿ ಯಾವುದೇ ತೊಂದರೆಯನ್ನು ಎದುರಿಸಬಾರದು ಎಂದು ಒತ್ತಾಯಿಸಿದ್ದಾರೆ. ಮತ್ತೆ ಜಗಳ ವಿಕೋಪಕ್ಕೆ ತಿರುಗಿ ಹಗ್ಗ ಜಗ್ಗಾಟವೂ ಶುರುವಾಗಿದೆ. ಕೋಪಗೊಂಡ ವಧುವಿನ ಕಡೆಯುವರು ವರನ ಕಡೆಯ ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.

ಅತ್ತೆ ಮನೆಗೆ ಹೋಗಲು ನಿರಾಕರಿಸಿದ ವಧು:ಈ ವಿವಾದಕ್ಕೆ ಸಂಬಂಧಿಸಿದಂತೆ ಎರಡು ದಿನಗಳಿಂದ ಸ್ಥಳೀಯ ಮಟ್ಟದಲ್ಲಿ ಪಂಚಾಯಿತಿ ಮಟ್ಟದಲ್ಲಿ ಪಂಚರ ಚೌಕಾಸಿಯೂ ನಡೆದಿದೆ. ಪರಿಹಾರ ಕಾಣದಿದ್ದಾಗ ಬಾಲಕನ ಕಡೆಯವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಗ್ರಾಮಸ್ಥರು ವಧು ವರವಿನ ವಿಷಯ ಬಗೆಹರಿಸಲು ಎರಡು ದಿನಗಳ ಕಾಲ ಪ್ರಯತ್ನಿಸಿದರೂ ವಿಫಲವಾಯಿತು.

ಕೊನೆಗೆ ವರನ ಕಡೆಯವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತುರ್ಕೌಲಿಯಾ ಪೊಲೀಸ್ ಠಾಣೆಯ ಅಧಿಕಾರಿ ಮಿಥಿಲೇಶ್ ಕುಮಾರ್ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳ ಅಭಿಪ್ರಾಯ ಮೇರೆಗೆ ವಧು ವರನ ಕಡೆಯವರಿಂದ ಅಭಿಪ್ರಾಯ ಸಂಗ್ರಹಿಸಿ ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಆದರೆ, ಆಗ ವಧು ವರನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಆ ಬಳಿಕ ವರನು ತನ್ನ ಮನೆಗೆ ವಧು ಇಲ್ಲದೇ ತನ್ನ ಮನೆಗೆ ಮರಳಬೇಕಾಗಿದೆ.

ಇದನ್ನೂ ಓದಿ:ಮೃತ ಗೆಳತಿ ಮದುವೆಯಾದ ಪ್ರಿಯಕರ: ಜೀವನದ ಉದ್ದಕ್ಕೂ ಒಬ್ಬಂಟಿಯಾಗಿರುವ ವಾಗ್ದಾನ

ABOUT THE AUTHOR

...view details