ಜಂಜಗಿರ್ ಚಂಪಾ (ಛತ್ತೀಸ್ಘಡ) :ಮೊದಲನೇ ಪತ್ನಿಗೆ ಕೈಕೊಟ್ಟು ಸದ್ದಿಲ್ಲದೆ ಮದುವೆಯಾಗುತ್ತಿದ್ದ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಲಾಗಿದೆ. ಮದುವೆ ಮಂಟಪಕ್ಕೆ ಆಗಮಿಸಿದ ಮೊದಲ ಪತ್ನಿ ಗಂಡನಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾಳೆ. ಹೌದು, ಜಂಜಗಿರ್ಚಂಪಾದಲ್ಲಿ ವರನ ಮೇಲೆ ತೀವ್ರವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಈ ಘಟನೆ ಭಾನುವಾರ ಶಿವನಾರಾಯಣ ಬಡೇಮಠ ದೇವಸ್ಥಾನದಲ್ಲಿ ಜರುಗಿದ್ದು, ತಡವಾಗಿ ಬೆಳಕಿಗೆ.
ಬಲೋಡಾ ಬಜಾರ್ ನಿವಾಸಿ ಸೋಮ್ ಪ್ರಕಾಶ್ ಜೈಸ್ವಾಲ್ ಎಂಬುವರ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿತ್ತು. ಆಗ ಮೊದಲ ಪತ್ನಿ ತನ್ನ ತಾಯಿಯ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಗಂಡನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದಾದ ನಂತರ ಎರಡೂ ಕಡೆಯವರಿಂದಲೂ ಮಾತಿನ ಚಕಮಕಿ ನಡೆದಿದ್ದು, ಎರಡೂ ಕುಟುಂಬದವರು ಶಿವನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದಾರೆ.