ನವದೆಹಲಿ: ದೇಶದಲ್ಲಿ ವೈರಸ್ ಹರಡುತ್ತಿರುವ ವೇಗವನ್ನು ಗಮನಿಸಿದರೆ ಭಾರಿ ಸಂಖ್ಯೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಈ ಮಾತಿಗೆ ಇಂಬು ನೀಡುವಂತೆ ಇಂದು ಕೋವಿಡ್ ಸಂಖ್ಯೆ ಲಕ್ಷ ದಾಟಿ ಮುನ್ನುಗ್ಗುತ್ತಿದೆ. ಗುರುವಾರ ಬೆಳಗ್ಗೆ ದೇಶವು 90,889 ಪ್ರಕರಣಗಳು ಕಂಡು ಬಂದವು. ಇಂದು ಆ ಸಂಖ್ಯೆ 1.17 ಲಕ್ಷಕ್ಕೆ ಏರಿಕೆ ಕಂಡಿದೆ. ಹಿಂದಿನ ದಿನಕ್ಕಿಂತ ಸುಮಾರು ಶೇ.50ರಷ್ಟು ಹೆಚ್ಚಾಗಿದೆ.
ಕೇವಲ 10 ದಿನದೊಳಗೆ ಅಂದ್ರೆ ಡಿಸೆಂಬರ್ 28 ರಂದು 9,195 ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಇಂದು ಲಕ್ಷದ ಹದಿನೇಳು ಸಾವಿರಕ್ಕೆ ತಲುಪಿದೆ. ಅಂದ್ರೆ ಶೇ. 1000ದಷ್ಟು ದೇಶದಲ್ಲಿ ಕೋವಿಡ್ ಪ್ರಕರಣಗಳ ಜಿಗಿತವು ಕಂಡಿದ್ದು, ಇದು ಹೊಸ ಅಲೆಯ ಸಾಂಕ್ರಾಮಿಕವಾಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.
ಮೊದಲ ಅಲೆಯಲ್ಲಿ ಇದೇ ರೀತಿಯ ಹೆಚ್ಚಳ ಕಂಡಿತ್ತು. 10,000 ರಿಂದ 1 ಲಕ್ಷ ಪ್ರಕರಣಗಳು ಸುಮಾರು 100 ದಿನಗಳವರೆಗೆ ದೇಶದಲ್ಲಿ ಕೊರೊನಾ ಪ್ರಕರಣಗಳು ಬರತೊಡಗಿದವು. ಎರಡನೇ ತರಂಗದ ಅವಧಿಯಲ್ಲಿ ಅರ್ಧದಷ್ಟು ಕಡಿಮೆಯಾಯಿತು. ಆದ್ರೂ ಪ್ರಸ್ತುತ ದಿನನಿತ್ಯದ ಸಂಖ್ಯೆಗಳು ಈ ಗರಿಷ್ಠ ಮಟ್ಟಕ್ಕೆ ಏರಲು 10 ದಿನಗಳನ್ನು ಸಹ ತೆಗೆದುಕೊಂಡಿಲ್ಲ.
ಓದಿ:ತನ್ನ ಕೂದಲಿನಿಂದಲೇ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಬರೆದ ಮಹಿಳೆ.. 6 ವರ್ಷದ ಬಳಿಕ ವಿಡಿಯೋ ಹಂಚಿಕೊಂಡ ನೀರೆ!
ಕಳೆದ ತಿಂಗಳ ಕೊನೆಯಲ್ಲಿ, ಭಾರತದ ಕರೋನಾ ವೈರಸ್ ಕಾರ್ಯಪಡೆಯ ಮುಖ್ಯಸ್ಥ ಡಾ.ವಿ.ಕೆ. ಪಾಲ್ ಹೇಳುವ ಪ್ರಕಾರ, ಒಮಿಕ್ರಾನ್ ರೂಪಾಂತರದ ಉಲ್ಬಣವು ನಿಧಾನವಾಗದಿದ್ದರೆ ದೇಶದಲ್ಲಿ ದಿನಕ್ಕೆ 14 ಲಕ್ಷ ಕೋವಿಡ್ ಪ್ರಕರಣಗಳು ಕಂಡು ಬರುತ್ತವೆ ಎಂದಿದ್ದಾರೆ.
"ನಾವು ಯುಕೆಯಲ್ಲಿ ಹರಡುವಿಕೆಯ ಪ್ರಮಾಣವನ್ನು ನೋಡಿದರೆ ಮತ್ತು ಭಾರತದಲ್ಲಿ ಇದೇ ರೀತಿಯ ಏಕಾಏಕಿ ಏರಿಕೆ ಆದ್ರೆ ನಮ್ಮ ಜನಸಂಖ್ಯೆ ಪ್ರಕಾರ ಪ್ರತಿದಿನ 14 ಲಕ್ಷ ಪ್ರಕರಣಗಳು ಕಂಡುಬರುತ್ತವೆ. ಫ್ರಾನ್ಸ್ 65,000 ಪ್ರಕರಣಗಳನ್ನು ವರದಿ ಮಾಡುತ್ತಿದೆ ಎಂದು ಪಾಲ್ ಹೇಳಿದರು.
ಒಮಿಕ್ರಾನ್‌ಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಭಾರತವು ಗುರುವಾರ 495 ವಿಭಿನ್ನ ಪ್ರಕರಣಗಳ ಅತಿದೊಡ್ಡ ಏಕದಿನ ಜಿಗಿತವನ್ನು ಕಂಡಿದೆ. ಒಮಿಕ್ರಾನ್ನ ಸೋಂಕುಗಳ ಸಂಖ್ಯೆ 3007 ಕ್ಕೆ ತಲುಪಿದೆ.
ಓದಿ:'ಪಂತ್ಗೆ ಆಕ್ರಮಣಕಾರಿ ಆಟವಾಡಬೇಡಿ ಎಂದು ನಾವು ಯಾರೂ ಹೇಳುವುದಿಲ್ಲ': ಕೋಚ್ ದ್ರಾವಿಡ್ ಬೆಂಬಲ
3007 ಒಮಿಕ್ರಾನ್ ಕೇಸ್ ದಾಖಲು
ಒಟ್ಟು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ ಗರಿಷ್ಠ 876, ದೆಹಲಿಯಲ್ಲಿ 465, ರಾಜಸ್ಥಾನ 291, ಕೇರಳ 284, ಕರ್ನಾಟಕ 333, ಗುಜರಾತ್ 204 ಮತ್ತು ತಮಿಳುನಾಡಿನಲ್ಲಿ 121 ಪ್ರಕರಣಗಳು ಕಂಡು ಬಂದಿವೆ. ದೇಶವು 90,928 ತಾಜಾ ಕೊರೊನಾ ವೈರಸ್ ಸೋಂಕುಗಳನ್ನು ವರದಿ ಮಾಡಿದೆ. ಇದು 200 ದಿನಗಳಲ್ಲಿ ಅತಿ ಹೆಚ್ಚು ದಾಖಲಾದ ಪ್ರಕರಣಗಳಾಗಿವೆ. ಕಳೆದ ವರ್ಷ ಜೂನ್ 10 ರಂದು 91,702 ಹೊಸ ಸೋಂಕುಗಳು ವರದಿಯಾಗಿತ್ತು.
ಇಂದು 302 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,83,178 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,71,363 ಆಗಿದ್ದು, ಇದುವರೆಗೆ ದೇಶದಲ್ಲಿ 149.66 ಕೋಟಿ ಡೋಸ್ ಲಸಿಕೆಯನ್ನ ನೀಡಲಾಗಿದೆ.