ಶ್ರೀನಗರ, ಜಮ್ಮು ಕಾಶ್ಮೀರ:ಕಣಿವೆ ನಾಡಿನಲ್ಲಿ ಭಯೋತ್ಪಾದಕರ ಹಾವಳಿ ತೀವ್ರವಾಗುತ್ತಿದ್ದು, ಅಪರಿಚಿತ ಉಗ್ರರು ಸಿಆರ್ಪಿಎಫ್ ಬಂಕರ್ ಮೇಲೆ ಗ್ರೆನೇಡ್ ದಾಳಿ ನಡೆಸಲು ಯತ್ನಿಸಿ, ವಿಫಲರಾಗಿದ್ದಾರೆ.
ಶುಕ್ರವಾರ ರಾತ್ರಿ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದು, ಶ್ರೀನಗರದ ನಾವಾ ಕರ್ದಾಲ್ ಪ್ರದೇಶದಲ್ಲಿರುವ ಸಿಆರ್ಪಿಎಫ್ ಬಂಕರ್ ಅನ್ನು ಗುರಿಯಾಗಿಸಿ, ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಅವರು ಎಸೆದ ಗ್ರೆನೇಡ್ ಸಿಡಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.