ಬಂಡಿಪೋರಾ (ಜಮ್ಮು ಕಾಶ್ಮೀರ):ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಾಲ್ ಪ್ರದೇಶದಲ್ಲಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಐದಾರು ಜನರು ಗಾಯಗೊಂಡಿದ್ದಾರೆ.
ಜಮ್ಮುಕಾಶ್ಮೀರದ ಸಂಬಾಲ್ನಲ್ಲಿ ಭದ್ರತಾ ಪಡೆ ಗುರಿಯಾಗಿಸಿ ಗ್ರೆನೇಡ್ ದಾಳಿ, ಹಲವರಿಗೆ ಗಾಯ - ಸಂಬಾಲದಲ್ಲಿ ಗ್ರೇನೆಡ್ ದಾಳಿ,
ಜಮ್ಮುಕಾಶ್ಮೀರದ ಸಂಬಾಲ್ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಹಲವು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಜಮ್ಮುಕಾಶ್ಮೀರದ ಸಂಬಾಲ್ನಲ್ಲಿ ಭದ್ರತಾ ಪಡೆ ಗುರಿಯಾಗಿಸಿ ಗ್ರೆನೇಡ್ ದಾಳಿ, ಹಲವರಿಗೆ ಗಾಯ grenade attack, grenade attack in Sumbal, Sumbal grenade attack, grenade attack news, ಗ್ರೇನೆಡ್ ದಾಳಿ, ಸಂಬಾಲದಲ್ಲಿ ಗ್ರೇನೆಡ್ ದಾಳಿ, ಸಂಬಾಲ್ನಲ್ಲಿ ಗ್ರೇನೆಡ್ ದಾಳಿ ಸುದ್ದಿ,](https://etvbharatimages.akamaized.net/etvbharat/prod-images/768-512-13459935-thumbnail-3x2-blast.jpg)
ಸಂಬಾಲ್ನಲ್ಲಿ ಭದ್ರಾತ ಪಡೆಗಳನ್ನು ಗುರಿಯಾಗಿಸಿ ಗ್ರೇನೆಡ್ ದಾಳಿ
ಉಗ್ರರು ಸಂಬಾಲ್‌ನ ಸೇತುವೆ ಪ್ರದೇಶದಲ್ಲಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಂಬಾಲ್‌ನ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಕ್ಕೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಬಾಲ್ನಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ
ಗಾಯಾಳುಗಳನ್ನು ಸೋಪೋರಾದ ಮುಷ್ತಾಕ್ ಅಹ್ಮದ್ ಭಟ್, ಮರ್ಕುಂಡಲ್‌ನ ಅಬ್ದುಲ್ ಹಮೀದ್ ಮಲ್ಲಾ ಅವರ ಪತ್ನಿ ತಸ್ಲೀಮಾ, ಬಶೀರ್ ಅಹ್ಮದ್ ಅವರ ಪುತ್ರ ಫರೋಜ್ ಅಹ್ಮದ್, ಮೊಹಮ್ಮದ್ ಅಲ್ತಾಫ್, ಸಫಾಪೋರಾದ ಫೈಸಲ್ ಅಹ್ಮದ್ ಮತ್ತು ಅಬ್ದುಲ್ ಹಮೀದ್ ಮಲ್ಲಾ ಎಂದು ಗುರುತಿಸಲಾಗಿದೆ.
Last Updated : Oct 26, 2021, 12:44 PM IST